ಹೆಚ್ಚುವರಿ ಹಣ ವಾಪಸಾತಿಗೆ ಸೂಚನೆ

7

ಹೆಚ್ಚುವರಿ ಹಣ ವಾಪಸಾತಿಗೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ಕಿರಣ್‌ಬೇಡಿ ಅವರ ವಾಯುಯಾನದ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಕೇಳಿ ಬರುತ್ತಿರುವ ಆರೋಪಗಳಿಗೆ ಟ್ರಸ್ಟ್ ಸದಸ್ಯರು  ಪ್ರತಿಕ್ರಿಯಿಸಿದ್ದಾರೆ. ಹೆಚ್ಚುವರಿ ಹಣವನ್ನು ಆಯೋಜಕರಿಗೆ ಮರಳಿಸುವಂತೆ ತಮ್ಮ ಟ್ರಸ್ಟ್‌ನ ಟ್ರಾವೆಲ್ ಏಜೆಂಟ್‌ಗೆ ಸೂಚಿಸಿದ್ದಾರೆ.ಕಿರಣ್ ಬೇಡಿ ತಮ್ಮ ಶೌರ್ಯ ಪ್ರಶಸ್ತಿಯಿಂದಾಗಿ  ರಿಯಾಯಿತಿ ದರದಲ್ಲಿ ಸಾಮಾನ್ಯ ದರ್ಜೆಯ ವಿಮಾನ ಯಾನ ಕೈಗೊಳ್ಳುತ್ತಿದ್ದರೂ, ಆಯೋಜಕರಿಂದ ಉನ್ನತ ದರ್ಜೆಯ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ಆ ಹಣವನ್ನು ತಾವು ಸ್ವಂತಕ್ಕೆ ಬಳಸಿಕೊಂಡಿಲ್ಲ, ಟ್ರಸ್ಟ್ ಮೂಲಕ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry