ಶನಿವಾರ, ಏಪ್ರಿಲ್ 17, 2021
31 °C

ಹೆಚ್ಚು ಚುಂಬಿಸುವ ಪತ್ನಿಗೆ ಪತಿ ಮೇಲೆ ಹೆಚ್ಚು ಪ್ರೀತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾಳೆಯೇ ಎನ್ನುವುದನ್ನು ನೀವು ತಿಳಿಯಬೇಕೇ? ಹಾಗಿದ್ದರೆ ಅವಳು ನಿಮಗೆ ಹೇಗೆ ಚುಂಬಿಸುತ್ತಾಳೆ ಅಥವಾ ತಬ್ಬಿಕೊಳ್ಳುತ್ತಾಳೆ ಎಂಬುದನ್ನು ಇಂದಿನಿಂದಲೇ ಗಮನಿಸಲು ಶುರು ಮಾಡಿ!ಪತಿಯನ್ನು ಹೆಚ್ಚಾಗಿ ಪ್ರೀತಿಸುವ ಪತ್ನಿಯು ಪತಿಗೆ ಕಿರಿಕಿರಿ ಉಂಟು ಮಾಡುವುದಿಲ್ಲ ಮತ್ತು ಅನೇಕ ಸಲ ಚುಂಬಿಸುತ್ತಾಳೆ ಅಥವಾ ತಬ್ಬಿಕೊಳ್ಳುತ್ತಾಳೆ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಹೊಸ ಸಮೀಕ್ಷೆಯಲ್ಲಿ ಈ ಅಂಶ ಕಂಡುಕೊಂಡಿದ್ದಾರೆ.ಪುರುಷರು ಸ್ವಾಭಾವಿಕವಾಗಿ ರಸಿಕರಾಗಿರುವುದಿಲ್ಲ. ಆದರೆ, ಅವರು ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಸಮೀಕ್ಷೆ ಸಂದರ್ಭದಲ್ಲಿ 168 ಜೋಡಿಗಳನ್ನು ಅವರ ಮದುವೆ ವಿಚಾರವಾಗಿ ಪ್ರಶ್ನಿಸಲಾಗಿತ್ತು. ಪುರುಷರು ಅವರ ಸಂಗಾತಿ ಬಗ್ಗೆ ಹಲವು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.ನಕಾರಾತ್ಮಕ ವಿಚಾರಗಳನ್ನು ಬಹಿರಂಗ ಮಾಡದಿರುವ ಮೂಲಕ ಮಹಿಳೆಯರು ತಮ್ಮ ಪ್ರೀತಿ ತೋರಿಸಿಕೊಳ್ಳುತ್ತಾರೆ. ಅದೇ ಪುರುಷರ ವಿಚಾರಕ್ಕೆ ಬಂದಾಗ ಅವರು ಲೈಂಗಿಕ ಚಟುವಟಿಕೆ ಮತ್ತು ಸಣ್ಣಪುಟ್ಟ ಕೆಲಸಗಳಲ್ಲಿ ಸಂಗಾತಿಗೆ ಸಹಕಾರ ನೀಡುತ್ತ ವಿವಾಹ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಬಯಸುತ್ತಾರೆ ಎಂದು ಅಧ್ಯಯನದಿಂದ ತಿಳಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.