ಹೆಚ್ಚು ಹಣ ಮೀಸಲಿಗೆ ಒತ್ತಾಯ

7

ಹೆಚ್ಚು ಹಣ ಮೀಸಲಿಗೆ ಒತ್ತಾಯ

Published:
Updated:

ರಾಯಚೂರು: ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಪ್ರಕಾರ ರಾಜ್ಯಕ್ಕೆ ಲಭ್ಯವಾಗಿರುವ ನೀರನ್ನು ಬಳಸಿಕೊಳ್ಳಲು ಈ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಗ್ರಾಪಂ, ತಾಪಂ ಹಾಗೂ ಜಿಪಂನ ಅನುದಾನ ದುರ್ಬಳಕೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕವು ಧರಣಿ ನಡೆಸಿತು.ಕೃಷ್ಣಾ ನ್ಯಾಯಾಧೀಕರಣ ತೀರ್ಪಿನಿಂದ ದೊರಕಿದ ನೀರನ್ನು ರಾಜ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಈ ಹಿಂದೆ ಕೃಷ್ಣಾ ನ್ಯಾಯಾಧೀಕರಣ ತೀರ್ಪು ಬರುವ ಬಗ್ಗೆಯೇ ಚರ್ಚೆ ಮಾಡುತ್ತ ರಾಜ್ಯ ಸರ್ಕಾರ ಕಾಲ ಹರಣ ಮಾಡಿದೆ. ಈಗ ತೀರ್ಪು ಬಂದಿದೆ. ಹೆಚ್ಚಿನ ಅನುದಾನ ದೊರಕಿಸಿ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಆಗ್ರಹಿಸಿದರು.ನಾರಾಯಣಪುರ ಬಲದಂಡೆ ಕಾಲುವೆ 95 ಕೀಮಿಯಿಂದ 157ರವರೆಗೆ ವಿಸ್ತರಣೆ ಮಾಡಬೇಕು, ನಂದವಾಡಗಿ, ಮರೋಳಮ ಬೋಳಮಾನದೊಡ್ಡಿ ಏತ ನೀರಾವರಿ ಯೋಜನೆ, 9ಎ ಕಾಲುವೆ ನಿರ್ಮಾಣ ಕಾಮಗಾರಿಗೆ ಈ ಸಾಲಿನ ಬಜೆಟ್‌ನಲ್ಲಿಯೇ ಹೆಚ್ಚು ಅನುದಾನ ದೊರಕಿಸಬೇಕು ಎಂದು ಆಗ್ರಹಿಸಿದರು.ಭೂಮಾಪನ ಇಲಾಖೆಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆ ಹೋಗಲಾಡಿಸಬೇಕು.  ನೆರೆಪೀಡಿತ ಗ್ರಾಮವಾದ ಮಾನ್ವಿ ತಾಲ್ಲೂಕಿನ ಬೇವನೂರು ಗ್ರಾಮದಲ್ಲಿ ನವಗ್ರಾಮ ನಿರ್ಮಾಣಕ್ಕೆ ಈಗ 2 ಎಕರೆ ಖರೀದಿಸಲಾಗಿದೆ. ಇನ್ನೂ 2 ಎಕರೆ ಇದಕ್ಕೆ ಖರೀದಿಸಿ ಬಡವರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.ಸಂಘಟನೆ ರಾಜ್ಯ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಗೌರವ ಅಧ್ಯಕ್ಷ ಅಮರಣ್ಣ ಗುಡಿಹಾಳ, ಜಿಲ್ಲಾ ಉಪಾಧ್ಯಕ್ಷ ದೊಡ್ಡ ಬಸನಗೌಡ ಬಲ್ಲಟಗಿ, ಬಸಪ್ಪ ಪೂಜಾರಿ ನೀರಮಾನ್ವಿ, ಶೇಖರಪ್ಪ ಸಾಹುಕಾರ ಹೊಕ್ರಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥರೆಡ್ಡಿ ಜಿನೂರ, ಹಂಪಣ್ಣ ಜಾನೇಕಲ್, ಚಿನ್ನಾರೆಡ್ಡಿ ವಕೀಲ, ಹನುಮಪ್ಪ ಯಡಹಳ್ಳಿ ಹಾಗೂ ಮತ್ತಿತರರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry