ಹೆಡ್ಲಿ, ರಾಣಾಗೆ ವಾರೆಂಟ್

7

ಹೆಡ್ಲಿ, ರಾಣಾಗೆ ವಾರೆಂಟ್

Published:
Updated:

ನವದೆಹಲಿ (ಪಿಟಿಐ): ಮುಂಬೈ ಸೇರಿದಂತೆ ದೇಶದ ಹಲವೆಡೆ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಅಮೆರಿಕದ ಪ್ರಜೆ ಡೇವಿಡ್ ಹೆಡ್ಲಿ, ತಹಾವುರ್ ರಾಣಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಮಾರ್ಚ್ 13ರಂದು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ದೆಹಲಿ ಹೈಕೋರ್ಟ್ ಶನಿವಾರ ಆದೇಶಿಸಿದೆ.

 

ರಾಷ್ಟ್ರೀಯ ತನಿಖಾ ಸಂಸ್ಥೆ  (ಎನ್‌ಐಎ) ಆರೋಪ ಪಟ್ಟಿಯಲ್ಲಿ ಹೆಸರಿಸಿದ ಒಟ್ಟು 9 ಆರೋಪಿಗಳ ವಿರುದ್ಧ ಹೈಕೋರ್ಟ್ ಇದೇ ವೇಳೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಸದ್ಯ ಅಮೆರಿಕದ ವಶದಲ್ಲಿರುವ ಹೆಡ್ಲಿ, ತಹಾವುರ್ ರಾಣಾ ಹಾಗೂ ಇತರ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಲು ಅಗತ್ಯಪ್ರಕ್ರಿಯೆ ಆರಂಭಿಸುವಂತೆ    ಹೈಕೋರ್ಟ್ ಇದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಅನುಮತಿ ನೀಡಿತು.ಅವರನ್ನು ವಶಕ್ಕೆ ಪಡೆಯಲು  ಎನ್‌ಐಎಗೆ ಸೀಮಿತವಾದ ಕಾನೂನು ಅವಕಾಶಗಳಿವೆ.  ಎನ್‌ಐಎ ಕಳೆದ ಡಿಸೆಂಬರ್ 24ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಪರಿಶೀಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಎಸ್.ಶರ್ಮ ಆದೇಶವನ್ನು ಕಾಯ್ದಿರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry