ಮಂಗಳವಾರ, ಜನವರಿ 21, 2020
18 °C

ಹೆಡ್ಲಿ ವಿಚಾರಣೆಗೆ ಭಾರತದ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಮುಂಬೈ ದಾಳಿಯ ಸಂಚು ರೂಪಿಸಿ, ಅಮೆರಿಕದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಭಯೋತ್ಪಾದಕ ಡೇವಿಡ್‌ ಹೆಡ್ಲಿಯ ವಿಚಾರಣೆಗೆ ಅವಕಾಶ ಕಲ್ಪಿಸುವಂತೆ ಭಾರತ ಅಮೆರಿಕವನ್ನು ಒತ್ತಾಯಿಸಿದೆ.ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿದ್ದ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಅಮೆರಿಕದ ಹಿರಿಯ ಅಧಿಕಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಈ ಬೇಡಿಕೆ ಮಂಡಿಸಿದ್ದಾರೆ.  ಭಾರತದ ತನಿಖಾ ಸಂಸ್ಥೆಗಳಿಗೆ ಹೆಡ್ಲಿ ವಿಚಾರಣೆಗೆ ಅವಕಾಶ ಮಾಡಿಕೊಡುವ ಕುರಿತು ಅಮೆರಿಕ ಯಾವುದೇ ಬದ್ಧತೆ ವ್ಯಕ್ತಪಡಿಸಿಲ್ಲ. ಆದರೆ, ಮುಂಬೈ ದಾಳಿಯ ಸಂಚು ರೂಪಿಸಿದವರಿಗೆ ಶಿಕ್ಷೆ ನೀಡುವಂತೆ ಪಾಕ್‌ ಮೇಲೆ ಒತ್ತಡ ತರುವುದಾಗಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)