ಹೆಡ್ಲಿ ಹಸ್ತಾಂತರ ಕೋರಿ ಹಿಲರಿಗೆ ಪತ್ರ- ಖುರ್ಷಿದ್

7

ಹೆಡ್ಲಿ ಹಸ್ತಾಂತರ ಕೋರಿ ಹಿಲರಿಗೆ ಪತ್ರ- ಖುರ್ಷಿದ್

Published:
Updated:

ನವದೆಹಲಿ (ಪಿಟಿಐ): ಪಾಕಿಸ್ತಾನ ಮೂಲದ ಅಮೆರಿಕದ ಲಷ್ಕರ್-ಎ-ತೈಯಬಾ ಸಂಘಟನೆಯ ಭಯೋತ್ಪಾದಕ ಡೆವಿಡ್ ಹೆಡ್ಲಿ ಮತ್ತು ಆತನ ಸಹಚರ ತವ್ವರ್ ಹುಸ್ಸೇನ್ ರಾಣಾನನ್ನು ಹಸ್ತಾಂತರಿಸಬೇಕು ಎಂದು ಕೋರಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಅಮೆರಿಕ ವಿದೇಶಾಂಗ ಸಚಿವೆ ಹಿಲರಿಮ ಕ್ಲಿಂಟನ್ ಅವರಿಗೆ ಪತ್ರ ಬರೆದಿದ್ದಾರೆ.ಜನವರಿಯಲ್ಲಿ ಈ ಇಬ್ಬರು ಭಯೋತ್ಪಾದಕರಿಗೆ ಶಿಕ್ಷೆ ವಿಧಿಸುವ ಮೊದಲು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.ನವೆಂಬರ್ ಮೊದಲ ವಾರದಲ್ಲಿ ಖುರ್ಷಿದ್ ಅವರು ಪತ್ರ ಬರೆದಿದ್ದು, ಅಮೆರಿಕ ಸರ್ಕಾರವು ಭಾರತದ ಕೋರಿಕೆಯನ್ನು ಮಾನ್ಯ ಮಾಡಬಹುದು ಎಂಬ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry