`ಹೆಡ್ಲಿ ಹೇಳಿಕೆ ಬಹಿರಂಗವಿಲ್ಲ'
ನವದೆಹಲಿ (ಪಿಟಿಐ): ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ಡೇವಿಡ್ ಹೆಡ್ಲಿ ನೀಡಿದ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ನಕಲಿ ಎನ್ಕೌಂಟರ್ನಲ್ಲಿ ಸಾವಿಗೀಡಾದ ಇಶ್ರತ್ ಜಹಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರ ಕುರಿತಂತೆ ಹೆಡ್ಲಿ ಹೇಳಿಕೆಯಲ್ಲಿ ಮಾಹಿತಿ ಇರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವರದಿ ನೀಡಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿಂಧೆ, `ತನಿಖಾ ಸಂಸ್ಥೆಯ ವರದಿ ಇನ್ನೂ ಬರಬೇಕಿದೆ' ಎಂದಷ್ಟೇ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.