ಶನಿವಾರ, ಮೇ 15, 2021
28 °C

`ಹೆಣ್ಣಿನ ಆತ್ಮ ಚರಿತ್ರೆಯಿಂದ ಕೌಟುಂಬಿಕ ಕ್ರೌರ್ಯ ಬಯಲು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ: ಪ್ರತಿಯೊಬ್ಬ ಹೆಣ್ಣು ಆತ್ಮಚರಿತ್ರೆ ಬರೆದರೆ ಕೌಟುಂಬಿಕ ಕ್ರೌರ್ಯ ಅನಾವರಣ ವಾಗುತ್ತದೆ. ಪುರುಷ ಪ್ರಧಾನ ಸಮಾಜದ ವಿಚಾರಗಳು ಹೊರಬರುತ್ತವೆ ಎಂದು ಸಾಹಿತಿ ಡಾ.ಎಚ್.ಎಸ್.ನಾಗವೇಣಿ ಅಭಿಪ್ರಾಯಪಟ್ಟರು.ಸೋಮವಾರ ತೀರ್ಥಹಳ್ಳಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಸೃಜನಶೀಲತೆ ಪೋಷಿಸುವ ಭಾಷೆ ಬೇಕು. ಅದಕ್ಕೆ ಸಂಸ್ಕಾರ ಬೇಕು. ಸಂಪ್ರದಾಯ, ಪುರುಷನಿಷ್ಠ ಸಮಾಜದಲ್ಲಿ ನಾವು ಬಳಸುವ ಭಾಷೆಗೆ ನೋಡುಗರ ದೃಷ್ಠಿಯೇ ಬೇರೆ ಇರುತ್ತದೆ ಎಂದರು.ಇಂದು ಪತ್ರಿಕೆಗಳು ಮಡಿವಂತಿಕೆಯನ್ನು ಮರೆತಿಲ್ಲ. ಬರವಣಿಗೆಗೆ ಮಡಿವಂತಿಕೆ ಕಾಡುತ್ತಿದೆ. ಮಹಿಳಾ ಬರಹಗಾರ್ತಿಯರನ್ನು ನೋಡುವ ಬಗೆಯೇ ಬದಲಾಗಬೇಕಾಗಿದೆ. ಕೆಳ ವರ್ಗದ ಜನರು ತಾವು ಬಳಸುವ ಭಾಷೆಯನ್ನೇ ಸಾಹಿತ್ಯದಲ್ಲಿ ಬಳಸಬೇಕು ಎಂದರು.ನಾನು ನನ್ನ ಬರಹದಲ್ಲಿ ರಾಜಿಗೆ ಸಿದ್ಧವಿಲ್ಲ. ಒಬ್ಬ ತಾಯಿಯಾಗಿ ಮಕ್ಕಳನ್ನು ಹೇಗೆ ನಿಭಾಯಿ ಸಬೇಕು ಎಂಬ ಜವಾಬ್ದಾರಿ ಇದೆ. ಅಪ್ಪ ಬಳಸುವ ಭಾಷೆಯನ್ನು ಬಳಸಬೇಡ. ಅದು ಈ ಸಮಾಜಕ್ಕೆ  ಇಷ್ಟವಾಗುವುದಿಲ್ಲ. ನೀನು ನನ್ನ ಭಾಷೆ ಬಳಸು ಎಂದು ತಾಯಿ ಹೇಳುತ್ತಾಳೆ. ಇಲ್ಲಿ ನಾವು ಅಪ್ಪನ ಭಾಷೆಯನ್ನೂ ಬಳಸುವಂತಿಲ್ಲ ಎನ್ನುವಲ್ಲಿ ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆ ಇದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಕೋಣಂದೂರು ಲಿಂಗಪ್ಪ, ಪ್ರಗತಿಪರ ಕೃಷಿಕ ಕೂಳೂರು ಸತ್ಯನಾರಾಯಣರಾವ್, ತಾಲ್ಲೂಕು ಕಸಾಪ ಅಧ್ಯಕ್ಷ ನೆಂಪೆ ದೇವರಾಜ್ ಮಾತ ನಾಡಿದರು.

ವೇದಿಕೆಯಲ್ಲಿ ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಕುಪ್ಪಳಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಗಂಗಾಧರ್, ಚಿತ್ರ ವಿಮರ್ಶಕ ಚಿ.ಸು. ಕೃಷ್ಣಶೆಟ್ಟಿ, ಸಾಹಿತಿ ರವಿ ಸಸಿತೋಟ ಅವರನ್ನು ಸನ್ಮಾನಿಸಲಾಯಿತು.ಜಿ.ಎಸ್.ನಾರಾಯಣರಾವ್ ಸ್ವಾಗತಿಸಿ, ಮಹಮದ್ ಅಲಿ ವಂದಿಸಿದರು.

ಡಾನ್ ರಾಮಣ್ಣ ಶೆಟ್ಟಿ, ಗಾಯಿತ್ರಿ ಶೇಷಗಿರಿ, ಸುಷ್ಮಾಧರ್ಮೇಶ್ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.