ಭಾನುವಾರ, ಜೂನ್ 13, 2021
22 °C
ಸಾಹಿತಿ ಕಮಲಾ ಹಂಪನಾ ಕರೆ

ಹೆಣ್ಣುಮಕ್ಕಳು ಗಟ್ಟಿಗೊಳ್ಳಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹೆಣ್ಣುಮಕ್ಕಳು ತಮ್ಮತನವನ್ನು ಉಳಿಸಿಕೊಂಡು ಗಟ್ಟಿಗೊಳ್ಳಬೇಕು. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಪ್ರಯತ್ನಶೀಲ­ರಾಗಬೇಕು’ ಎಂದು ಲೇಖಕಿ ಕಮಲಾ ಹಂಪನಾ ಹೇಳಿದರು.ಒನಕೆ ಓಬವ್ವ ಮಹಿಳಾ ಸರ್ಕಾರಿ ನೌಕರರ ವೇದಿಕೆಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಹೆಣ್ಣುಮಕ್ಕಳು ಸೌಮ್ಯ ಸ್ವಭಾವದೊಂದಿಗೆ ಉಗ್ರ ರೂಪವನ್ನೂ ತಾಳಬಲ್ಲರು. ಪುರುಷರಿಗೆ ಸರಿದಾರಿ ತೋರಿ, ಅವರಿಗೆ ಮಾರ್ಗದರ್ಶನವನ್ನು ನೀಡಿ, ಅವರ ಬಾಳಿಗೆ ಬೆಳಕಾಗಬಲ್ಲಳು’ ಎಂದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮಾತನಾಡಿ, ‘ಮಹಿಳೆಗೆ ವಿಶೇಷವಾದ ಶಕ್ತಿಯಿದೆ.  ಅವಳಿಗೆ ಪ್ರೋತ್ಸಾಹ ನೀಡಿದರೆ, ಅವಳು ಜಗತ್ತನ್ನೇ ಜಯಿಸುತ್ತಾಳೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.