ಹೆಣ್ಣು ಚಿರತೆಯ ಕಳೇಬರ ಪತ್ತೆ

7

ಹೆಣ್ಣು ಚಿರತೆಯ ಕಳೇಬರ ಪತ್ತೆ

Published:
Updated:

ಪಾವಗಡ: ಚಿರತೆಯ ಮೃತ ದೇಹ ತಾಲ್ಲೂಕಿನ ವೈ.ಎನ್‌.ಹೊಸಕೋಟೆ ಬಳಿ ಮಂಗಳವಾರ ಪತ್ತೆಯಾಗಿದ್ದು, ಅರಣ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ವೈ.ಎನ್‌.ಹೊಸಕೋಟೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.ಹೆಣ್ಣು ಚಿರತೆಯ ವಯಸ್ಸು ಸುಮಾರು 2ರಿಂದ 3 ವರ್ಷ ಎಂದು ಅಂದಾಜಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿರತೆಯ ಅವಯವದ ಮಾದರಿಯನ್ನು ವಿಧಿ ವಿಜ್ಞಾನ ಕೇಂದ್ರಕ್ಕೆ  ರವಾನಿಸಲಾಗಿದೆ. ಬೇರೆಲ್ಲೋ ಸತ್ತಿರುವ ಚಿರತೆಯ ದೇಹವನ್ನು ಇಲ್ಲಿ ಎಸೆದಿರಬಹುದು ಎಂದು  ಅರಣ್ಯಾಧಿಕಾರಿ ಎಚ್ .ರಾಮ­ಮೂರ್ತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry