ಗುರುವಾರ , ಮೇ 19, 2022
21 °C

ಹೆಣ್ಣು ಭ್ರೂಣ ಹತ್ಯೆ ಮಹಾಪಾಪ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಧೋಳ: ವೈದ್ಯ ವೃತ್ತಿಯಲ್ಲಿ ಇಂದು ಮಾನವೀಯ ಮೌಲ್ಯಗಳ ಕುಸಿತ ಕಂಡುಬರುತ್ತಿದೆ. ವೈದ್ಯರಲ್ಲಿ ದೇವರನ್ನು ಕಾಣುವ ಈ ವೃತ್ತಿಯ ಹಿರಿಮೆ ಗರಿಮೆಗಳನ್ನು ಎತ್ತಿಹಿಡಿದು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.ಮುಧೋಳದ ರನ್ನ ಸಾಂಸ್ಕೃತಿಕ ಭವನದಲ್ಲಿ ಭಾರತೀಯ ವೈದ್ಯಕೀಯ ಸಂಘ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದೇಶದಲ್ಲಿ ಗಂಡು ಹೆಣ್ಣಿನ ಅನುಪಾತ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.`ಗರ್ಭದಲ್ಲಿ ಹಾಗೂ ಹೊರಗಡೆ ಭದ್ರವಾಗಿಲ್ಲ. ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ವೈದ್ಯರು ಈ ಹತ್ಯೆ ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಹುಬ್ಬಳ್ಳಿಯ ನರ ರೋಗ ತಜ್ಞ ಡಾ.ಸುರೇಶ ದುಗ್ಗಾಣಿ ಮಾತನಾಡಿ, `ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಬುದ್ಧಿವಂತಿಕೆ' ಎಂದರು.ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಡಾ.ಎಂ.ಬಿ.ದಿಲ್‌ಶಾದ್ ಮಾತನಾಡಿ ನಗಿಸುವುದು ಯೋಗ, ನಗುವುದು ಭೋಗ, ನಗದೆ ಇರುವದು ರೋಗ ವೆಂದು ಎಂದಿನ ತಮ್ಮ ಹಾಸ್ಯದ ಮೂಲಕ ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದರು.ಶಾಸಕ ಗೋವಿಂದ ಕಾರಜೋಳ, ಹಿರಿಯ ವೈದ್ಯ ಡಾ.ವಿ.ಕೆ.ಕಕರಡ್ಡಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವಿ.ಎನ್.ನಾಯ್ಕ ವಹಿಸಿದ್ದರು.ಡಾ.ಶಿವಾನಂದ ಕುಬಸದ ಪ್ರಸ್ತುತ ಪಡಿಸಿದ ಸ್ವರಚಿತ ಕವನ ಸಭಿಕರ ಮನ ಮುಟ್ಟಿತು. ಪಟ್ಟಣದ ಹಿರಿಯ ವೈದ್ಯರಾದ ಡಾ.ಗಿರಿಜಾ ಹೊಸೂರ, ಡಾ.ಎಸ್.ಎಂ.ಪುಜಾರಿ, ಡಾ.ಸರೋಜಿನಿ ಯಳಸಂಗಿಕರ (ಚಿಪ್ಪಲಕಟ್ಟಿ), ಡಾ.ದಿಲೀಪ ತಲಾಠಿ, ಡಾ.ಮಾಧವ ಬಕ್ಷಿ, ಡಾ.ಎ.ಎಸ್.ಕತ್ತಿ, ಡಾ.ಅನೀಲ ಕಾತೋಟೆ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಭಾರತೀಯ ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಕುಬಸದ ಸ್ವಾಗತಿಸಿದರು. ಡಾ.ಶಿಲ್ಪಾ ಹೊಸೂರ, ಡಾ.ಜಯಪ್ರಭು ಉತ್ತೂರ ನಿರೂಪಿಸಿದರು. ಡಾ.ರಾಜೇಶ ತಲಾಠಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.