ಭಾನುವಾರ, ಏಪ್ರಿಲ್ 11, 2021
32 °C

ಹೆಣ್ಣು ಮಕ್ಕಳಿಗೂ ಸಮಪಾಲು ಆಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ವಾರ್ಸಾ ಕಾಯ್ದೆ- 2005ರ ಮೂಲಕ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಹ ಗಂಡು ಮಕ್ಕಳಷ್ಟೇ ಸಮನಾದ ಆಸ್ತಿ ಹಕ್ಕನ್ನು ನೀಡಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಎಸ್.ವಿ. ಕುಲಕರ್ಣಿ ಹೇಳಿದರು. ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ಜಮಖಂಡಿಯ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜು ಹಾಗೂ ಕಾನೂನು ಕಾಲೇಜು ಜಂಟಿಯಾಗಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಿಶೇಷ ಸೇವಾ ಶಿಬಿರದಲ್ಲಿ ಕಾನೂನು ಅರಿವು-ನೆರವು ಕುರಿತು ಅವರು ಮಾತನಾಡಿದರು.ಪ್ರಧಾನ ದಿವಾಣಿ ನ್ಯಾಯಾಧೀ (ಹಿ.ಶ್ರೇ.) ಜಿ.ವಿ. ತುರಮರಿ ಮಾತನಾಡಿ, ಅರ್ಹ ಕಕ್ಷಿದಾರರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ನೀಡುವ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು. ಮಾಹಿತಿ ಹಕ್ಕು ಕಾಯ್ದೆ ಕುರಿತು ವಕೀಲ ಎಂ.ಸಿ.ಭಂಡಾರಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕುರಿತು ವಕೀಲ ಎಸ್.ಜಿ.ಭೂಮಾರ ಮಾತನಾಡಿದರು. ಸದಾಶಿವ ಮಲ್ಹಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಪಿಪಿ ಎಸ್.ಜಿ. ಮುಲ್ಲಾ, ಎಪಿಪಿ ಸಿ.ಎಸ್.ಬಡಿಗೇರ, ಪಿಎಸ್‌ಐ ಎಸ್.ಆರ್. ಶ್ರೀಧರ, ವಕೀಲ ಉಮೇಶ ಖಿಳೆಗಾಂವಿ, ಕಾನೂನು ಕಾಲೇಜು ಪ್ರಾಚಾರ್ಯ ಎಸ್.ಎಂ. ಹುಲ್ಲೂರ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಎ.ವಿ. ಸೂರ್ಯವಂಶಿ, ಡಾ.ಟಿ.ಪಿ. ಗಿರಡ್ಡಿ ವೇದಿಕೆಯಲ್ಲಿದ್ದರು. ಕಾಶಿನಾಥ ಪ್ರಾರ್ಥಿಸಿದರು. ಶಿವಲಿಂಗ ಹಿಪ್ಪರಗಿ ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಆರ್.ಜಿ. ಕುಲಕರ್ಣಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.