ಶುಕ್ರವಾರ, ಜೂನ್ 18, 2021
23 °C

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: `ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎ್ಲ್ಲಲ ರಂಗಗಳಲ್ಲೂ ಮುಂದೆ ಬರಲು ಪೋಷಕರು ಪ್ರೇರೇಪಿಸಬೇಕು~ ಎಂದು ಶಾಸಕ ಜಿ.ಎನ್. ನಂಜುಂಡಸ್ವಾಮಿ ಸಲಹೆ ನೀಡಿದರು.ಪಟ್ಟಣದ ದೇವಾಂಗ ಬೀದಿಯಲ್ಲಿ ನಬಾರ್ಡ್ ಯೋಜನೆ ಅಡಿಯಲ್ಲಿ 18.52 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಪಟ್ಟಣದಲ್ಲಿ ಬಾಲಕಿಯರಿಗೆ ಪ್ರತ್ಯೇಕವಾಗಿ ಶಾಲೆ ಆರಂಭವಾಗಿ 4 ವರ್ಷಗಳಾಗಿವೆ. ಆದರೆ ಇದಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಈ ಸ್ಥಿತಿಯಲ್ಲಿ ತಾಲ್ಲೂಕು ಪಂಚಾಯಿತಿಗೆ ಸೇರಿದ ಖಾಲಿ ನಿವೇಶನ ನೀಡಿದ ಅಧ್ಯಕ್ಷರಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ  ಕಟ್ಟಡದ ಮೇಲ್ಭಾಗದ್ಲ್ಲಲಿ ನಿರ್ಮಿಸಲಿರುವ ರೂ.14.82 ಲಕ್ಷ ವೆಚ್ಚದ ಮೂರು ಕೊಠಡಿಗಳ ಕಾಮಗಾರಿಗೆ ಚಾಲನೆ ನೀಡಿದರು.ತಾ.ಪಂ. ಅಧ್ಯಕ್ಷೆ ಉಮಾವತಿ ಸಿದ್ಧರಾಜು ಮಾತನಾಡಿ, ಮಹಿಳಾ ಶಿಕ್ಷಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಉಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುಂದೆ ಬರುವ ಮೂಲಕ ಎ್ಲ್ಲಲ ರಂಗಗಳಲ್ಲೂ ಮಹಿಳೆಯರು ತಮ್ಮ ಛಾಪು ಮೂಡಿಸಬೇಕು ಎಂದರು.ಬಿಇಒ ಪಿ.ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ.ಪಂ. ಅಧ್ಯಕ್ಷ ರಂಗಸ್ವಾಮಿ, ತಾ.ಪಂ. ಸದಸ್ಯರಾದ ಕೆ.ಪಿ. ಶಿವಣ್ಣ, ವೆಂಕಟಾಚಲ, ಟಿಎಪಿಸಿಎಂಎಸ್ ಅಧ್ಯಕ್ಷ ಶಾಂತಮೂರ್ತಿ, ಬಿಆರ್‌ಸಿ ರಾಚಪ್ಪ, ಶಿಕ್ಷಣ ಸಂಯೋಜಕ ವೀರಭದ್ರಸ್ವಾಮಿ, ಮುಖ್ಯಶಿಕ್ಷಕ ಚಂದ್ರಕುಮಾರ್, ಶಿಕ್ಷಕರಾದ ಮಹಾದೇವ್, ನಾಗೇಶ್, ಶಿವಲಂಕಾರ್, ಪಿ. ಸಂಧ್ಯಾಲಕ್ಷ್ಮಿ, ಲಕ್ಷ್ಮಿ, ನಿರ್ಮಿತಿ ಕೇಂದ್ರದ ಎಂಜಿನಿಯರ್ ರವಿ, ಮುಖಂಡರಾದ ವೈ,ಆರ್. ನಾಗೇಶ್, ನಾಗರಾಜು  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.