ಹೆಣ್ಣು ಮಗುವಿಗೆ ಸಿಗರೇಟಿನಿಂದ ಸುಟ್ಟ ಅಪ್ಪ!

7

ಹೆಣ್ಣು ಮಗುವಿಗೆ ಸಿಗರೇಟಿನಿಂದ ಸುಟ್ಟ ಅಪ್ಪ!

Published:
Updated:
ಹೆಣ್ಣು ಮಗುವಿಗೆ ಸಿಗರೇಟಿನಿಂದ ಸುಟ್ಟ ಅಪ್ಪ!

ಹುಬ್ಬಳ್ಳಿ: ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೊಬ್ಬ ಒಂದು ವರ್ಷದ ಮಗುವಿಗೆ ಸಿಗರೇಟ್‌ನಿಂದ ಸುಟ್ಟು ತೀವ್ರ ಗಾಯಗೊಳಿಸಿದ ಘಟನೆ ಧಾರವಾಡ ತಾಲ್ಲೂಕು ಮುಗದದಲ್ಲಿ ನಡೆದಿದೆ.ಮುಗದದ ನಿವಾಸಿ ರಮೇಶ ಸುಣಗಾರ, ಲಕ್ಷ್ಮಿ ದಂಪತಿ ಮಗಳು ಕಮಲಾವತಿ (ಮೇರಿ) ಅಪ್ಪನ ಕ್ರೌರ್ಯಕ್ಕೆ ಸಿಲುಕಿ ನಲುಗಿದ್ದಾಳೆ. ಮಗುವಿಗೆ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ (ಕಿಮ್ಸ)ನ ಮಕ್ಕಳ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದೆ.ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್‌ನವರಾದ ದಂಪತಿ ಮುಗದದಲ್ಲಿ ಬಾಡಿಗೆ ಮನೆಯಲ್ಲಿ ವಾಸವ್ದ್ದಿದು, ಗೌಂಡಿ ಕೆಲಸ ಮಾಡುತ್ತ್ದ್ದಿದಾರೆ. ಮದ್ಯವ್ಯಸನಿಯಾಗಿರುವ ರಮೇಶ ಹೆಣ್ಣುಮಗು ಹುಟ್ಟಿದೆ ಎಂಬ ಕಾರಣಕ್ಕೆ ನಿತ್ಯ ಹೆಂಡತಿಗೆ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ. ಲಕ್ಷ್ಮಿ ಕೆಲಸಕ್ಕೆ ಹೋದಾಗ ಮನೆಯಲ್ಲಿಯೇ ಇದ್ದ ರಮೇಶ ಸಿಗರೇಟು ಸೇದಿ ಮಗಳ ಮೈಯನ್ನು ಸುಟ್ಟಿದ್ದಾನೆ. ಮಗುವಿನ ಕಿರುಚಾಟ ಕೇಳಿದ ಅಕ್ಕಪಕ್ಕದವರು ತಾಯಿ ಕರೆಸಿ ಪರಿಶೀಲಿಸಿದಾಗ ಎದೆ, ಕುತ್ತಿಗೆ, ಹೊಟ್ಟೆ, ಬೆನ್ನಿನ ಭಾಗದಲ್ಲಿ ಸುಟ್ಟಿರುವುದು ಗಮನಕ್ಕೆ ಬಂದಿದೆ.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಷಾ ಪಟವಾರಿ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದರು. ಉಷಾ ನೀಡಿದ ದೂರಿನ ಅನ್ವಯ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಆರೋಪಿ ರಮೇಶ ಸುಣಗಾರ ಅವರನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry