ಶನಿವಾರ, ಮೇ 15, 2021
25 °C

ಹೆಣ್ಣು ಶಿಶುವಿನ ಕೊಲೆ ಪ್ರಕರಣ: ಮುಖ್ಯ ನ್ಯಾಯಮೂರ್ತಿ ಸೆನ್ ತೀವ್ರ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹೆಣ್ಣು ಮಗು ಎಂಬ ಕಾರಣಕ್ಕೆ ತಂದೆಯಿಂದಲೇ ಹಲ್ಲೆಗೊಳಗಾಗಿ ಬುಧವಾರ ಸಾವನ್ನಪ್ಪಿದ ನೇಹಾ ಆಫ್ರಿನ್ ಬಗ್ಗೆ ಹೈಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿತು.ಮಗುವಿನ ತಾಯಿಗೆ (ರೇಷ್ಮಾ ಬಾನು) ಏನಾದರೂ ಕಾನೂನಿನ ನೆರವು ಬೇಕಿದ್ದರೆ ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹೇಳಿದರು.ರಾಜ್ಯದಲ್ಲಿ ತಲೆದೋರಿರುವ ಅಪೌಷ್ಟಿಕತೆ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾ.ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ವಿಚಾರಣೆ ವೇಳೆ ಮಗುವಿನ ಬಗ್ಗೆ ಚರ್ಚೆ ನಡೆಯಿತು.ನ್ಯಾ. ಸೇನ್ ಅವರು, `ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣದ ಅಗತ್ಯ ಇದೆ. ಆಕೆ ತನ್ನ ಕಾಲ ಮೇಲೆ ನಿಲ್ಲುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಇಂತಹ ದೌರ್ಜನ್ಯಗಳಿಂದ ಆಕೆ ಹೊರಕ್ಕೆ ಬರಬಹುದು~ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ಆಕೆಯ ಪರವಾಗಿ ಗೊತ್ತು ಮಾಡಲಾಗಿದೆ ಎಂದು ವಕೀಲರು ನ್ಯಾಯಮೂರ್ತಿಗಳಿಗೆ ತಿಳಿಸಿದರು. ಅದಕ್ಕೆ ನ್ಯಾ. ಸೇನ್ ಅವರು, `ಈಗ ರೇಷ್ಮಾ ಅವರಿಗೆ ಪತಿಯ ಮೇಲೆ ಕೋಪ ಇದೆ. ಆದರೆ ಇನ್ನು 4-5 ತಿಂಗಳಿನಲ್ಲಿ ಅವರು ಪತಿಯ ಪರವಾಗಿಯೇ ಹೇಳಿಕೆ ನೀಡಿದರೂ ಅಚ್ಚರಿ ಇಲ್ಲ~ ಎಂದು ಅಭಿಪ್ರಾಯ ಪಟ್ಟರು.  ಸಮಿತಿ ರಚನೆ:  ಈ ಮಧ್ಯೆ, ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದಲ್ಲಿ ಅಪೌಷ್ಟಿಕತೆ ಹೋಗಲಾಡಿಸುವ ಸಂಬಂಧ ಸಮಿತಿಯನ್ನು ಸರ್ಕಾರ ರಚನೆ ಮಾಡಿದ್ದು, ಈ ಕುರಿತು ಹೈಕೋರ್ಟ್‌ಗೆ ವಿವರಿಸಿತು.ಈ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು ಸೇರಿದಂತೆ ಒಟ್ಟೂ ಒಂಬತ್ತು ಮಂದಿಯನ್ನು ಒಳಗೊಂಡಿದೆ.

ಈ ಸಮಿತಿಗೆ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡುವುದಾಗಿ ಅಡ್ವೊಕೇಟ್ ಜನರಲ್ ತಿಳಿಸಿದರು.

15 ದಿನಗಳ ಒಳಗೆ ಮೊದಲ ಸಭೆ ನಡೆಸಿ ಆ ಬಗ್ಗೆ ವರದಿ ನೀಡುವಂತೆ ನ್ಯಾಯಮೂರ್ತಿಗಳು ಸಮಿತಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದರು.ಅವಧಿ ವಿಸ್ತರಣೆ

ಮಾರ್ಚ್ 2ರಂದು ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರು, ಪೊಲೀಸರು ಮತ್ತು ಮಾಧ್ಯಮದವರ ನಡುವೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದ ತನಿಖೆ ನಡೆಸಲು ನೇಮಿಸಿರುವ ನ್ಯಾಯಮೂರ್ತಿ ಆರ್.ಜಿ.ವೈದ್ಯನಾಥನ್ ಸಮಿತಿಯ ಅವಧಿಯನ್ನು ಮೇ 10ರವರೆಗೆ ಸರ್ಕಾರ ವಿಸ್ತರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.