ಭಾನುವಾರ, ಜೂನ್ 13, 2021
22 °C

ಹೆತ್ತವರಿಗೆ ಭಾರವಾದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಹೆಂಗಸೊಬ್ಬಳು ಒಂದೇ ಕುಟುಂಬದ ಮೂವರು ಹೆಣ್ಣು ಮಕ್ಕಳನ್ನು ಹಾಸನದಿಂದ ಕರೆತಂದು ಪಟ್ಟಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಬಿಟ್ಟು ಹೋಗಿರುವುದು ಬುಧವಾರ ರಾತ್ರಿ ಪತ್ತೆಯಾಗಿದೆ.ಮೂವರು ಹೆಣ್ಣು ಮಕ್ಕಳಲ್ಲಿ ಅನಿತಾ (10) ಹೇಳುವ ಪ್ರಕಾರ, ಅವರ ಊರು ಹಾಸನದ ನಿಟ್ಟೂರು. ತಂದೆ ಮಂಜಣ್ಣ ಗಾರೆ ಕೆಲಸಗಾರಾಗಿದ್ದು, ಅವರಿಗೆ ಹಾಸನದಲ್ಲಿ ಹಿಂದೊಮ್ಮೆ ಪರಿಚಿತವಾಗಿದ್ದ ಹೆಂಗಸೊಬ್ಬಳು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಸುತ್ತೇನೆಂದು ಅನಿತಾಳನ್ನು ಮಂಗಳವಾರ ಅವರ ಊರಿನಿಂದ ಕರೆತಂದಿದ್ದಾಳೆ. ಅವಳ ತಂಗಿಯರಾದ ಅರ್ಚನಾ, ನಂದಿನಿ ಕೂಡ ಅಕ್ಕನೊಂದಿಗೆ ನಾವೂ ಬರುತ್ತೇವೆ ಎಂದು ಹಿಂದೆ ಬಂದಿದ್ದಾರೆ.ಈ ಮೂವರು ಕೆಲಸಕ್ಕೆ ಬರುವುದಕ್ಕೆ ಮಕ್ಕಳ ತಾಯಿ ಕೂಡ ಒಪ್ಪಿಗೆ ಕೊಟ್ಟಿದ್ದಾಗಿ ಮಕ್ಕಳು ಹೇಳುತ್ತಿವೆ.

ಆ ಹೆಂಗಸು ಮಂಗಳವಾರ ರಾತ್ರಿ ಮೂರೂ ಮಕ್ಕಳನ್ನು ಬಸ್‌ನಿಲ್ದಾಣದಲ್ಲಿ ಮಲಗಿಸಿದ್ದಾಳೆ. ಬೆಳಿಗ್ಗೆ ಏಳುವ ವೇಳೆಗೆ ಆಕೆ ನಾಪತ್ತೆಯಾಗಿದ್ದು ದಿಕ್ಕು ತೋಚದ ಮಕ್ಕಳು ಪಟ್ಟಣದ ಬೀದಿ ಬೀದಿಗಳಲ್ಲಿ ಆಕೆಯನ್ನು ಹುಡುಕಿ ಅಲೆದಾಡಿದ್ದಾರೆ.ಬುಧವಾರ ರಾತ್ರಿ 8ಗಂಟೆ ವೇಳೆಯಲ್ಲಿ ಇಂದಿರಾ ನಗರದ ನಿವಾಸಿಗಳು ತಮ್ಮ ಕೇರಿಯಲ್ಲಿ ಆಟವಾಡುತ್ತಿದ್ದ ಈ ಅಪರಿಚಿತ ಮಕ್ಕಳನ್ನು ನೋಡಿ ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಹೊರಗೆ ಬಂದಿದೆ.

ಮಕ್ಕಳು ಹೇಳುವ ಪ್ರಕಾರ ಅವರನ್ನು ಕರೆತಂದ ಹೆಂಗಸು ಕರ‌್ರಗೆ, ಕುಳ್ಳಗಿದ್ದಾಳೆ.

 

ಆಕೆ ಹೆಸರು ಮಕ್ಕಳಿಗೆ ಗೊತ್ತಿಲ್ಲ. ಮಂಜಣ್ಣನ ಕೊನೆಯ ಗಂಡು ಮಗು ಮಾತ್ರ ಮನೆಯಲ್ಲಿದೆ ಎಂದು ಅನಿತಾ ಹೇಳುತ್ತಾಳೆ.ಸಾಕಲಾಗದೆ ಹೆಣ್ಣು ಮಕ್ಕಳನ್ನು ಸಾಗಹಾಕಲು ಸಂಚು ನಡೆದಿರಬಹುದು ಎಂಬ ಅನುಮಾನವಿದ್ದು ಪೊಲೀಸರು ಬುಧವಾರ ರಾತ್ರಿ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.