ಹೆತ್ತವರ ಜೋಪಾನ ಮಕ್ಕಳ ಕರ್ತವ್ಯ: ಸದಾಶಿವ ಶ್ರೀ

ಸೋಮವಾರ, ಮೇ 20, 2019
30 °C

ಹೆತ್ತವರ ಜೋಪಾನ ಮಕ್ಕಳ ಕರ್ತವ್ಯ: ಸದಾಶಿವ ಶ್ರೀ

Published:
Updated:

ಹಾವೇರಿ: `ತಂದೆ ತಾಯಿಗಳನ್ನು ಮುಪ್ಪಿನ ವಯಸ್ಸಿನಲ್ಲಿ ಜೋಪಾನ ಮಾಡುವುದು ಮಕ್ಕಳ ಕರ್ತವ್ಯ. ಇಂತಹ ಜವಾಬ್ದಾರಿಯನ್ನು ಇಂದಿನ ಯುವಕರು ಬೆಳೆಸಿಕೊಂಡರೆ ದೇಶದಲ್ಲಿ ವೃದ್ಧಾಶ್ರಮದ ಅವಶ್ಯಕತೆ ಇರುವು ದಿಲ್ಲ~ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು.ನಗರದ ಶಿವಲಿಂಗೇಶ್ವರ ಪದವಿ ಹಾಗೂ ಪದವಿ ಪೂರ್ವ ಮಹಿಳಾ ಕಾಲೇಜು ಮತ್ತು ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ರಾಜೀವಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಹಿಸಿ ಅವರು ಮಾತನಾಡಿದರು.ಮನುಷ್ಯರ ಹುಟ್ಟು ಹಬ್ಬಗಳು ಅರ್ಥಪೂರ್ಣವಾಗಿ ಆಚರಣೆಗೊಳ್ಳ ಬೇಕು. ಹುಟ್ಟು ಹಬ್ಬ ಮುಖ್ಯವಲ್ಲ. ಅದರ ಹಿಂದಿನ ಉದ್ದೇಶ, ಸಂದೇಶ ಗಳನ್ನು ತಿಳಿದುಕೊಂಡು ಮನಷ್ಯರಲ್ಲಿ ಸದ್ಭಾವನೆಗಳನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದರು.ರಾಜೀವಗಾಂಧಿ ಅವರು ಜೀವನ, ರಾಜಕೀಯ ನೀತಿ ಹಾಗೂ ತಂತ್ರಜ್ಞಾನ ದಲ್ಲಿ ಸಾಧನೆ ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಿವೆ. ಈ ಹಿನ್ನೆಯಲ್ಲಿ ಯುವಕರು ಗುರು ಹಿರಿಯ ರನ್ನು ಗೌರವಿಸುವ ಮೂಲಕ ಉತ್ತಮ ಆದರ್ಶ ಗುಣಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾ ಲಯದ ಸಂಚಾಲಕಿ ಲೀಲಾಜಿ ಅವರು ಮಾತನಾಡಿ, ಆಧುನಿಕ ಜಗತ್ತಿನ ಮನುಷ್ಯರಲ್ಲಿ ಸದ್ಭಾವನೆಗಳ ಕೊರತೆಗೆ ಆತನಲ್ಲಿ ವಿಕಾರಗೊಳ್ಳುತ್ತಿರುವ ಮನಸ್ಸೇ ಕಾರಣ. ಪ್ರಾಣಿ ಪಕ್ಷಿಗಳು ಕೂಡ ಸಹ ಜೀವನ ನಡೆಸುತ್ತಿವೆ ಆದರೆ, ಮನುಷ್ಯ ಒಂದಾಗಿ ಬಾಳುವು ದನ್ನು ಮರೆಯುತ್ತಿ ರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಸದ್ಭಾವನೆ ಕೇವಲ ಆಚರಣೆಯಾಗಬಾರದು. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳವ ಮೂಲಕ ಸಮಾಜದ ಹಾಗೂ ರಾಷ್ಟ್ರದ ಹಿತ ಸಾಧಿಸಬೇಕು ಎಂದರು.ಈ ಸಂದರ್ಭದಲ್ಲಿ  ಪದವಿ ಮಹಿಳಾ ಮಹಾವಿದ್ಯಾಲದ ಪ್ರಾಚಾರ್ಯೆ ಸವಿತಾ ಹಿರೇಮಠ, ವಿ.ಕೆ.ಹಲಕಣ್ಣನ ವರ, ಬಿ.ಎಂ.ನೇಕಾರ ಹಾಗೂ ಸಿಬ್ಬಂದಿ ಹಾಜರಿದ್ದರು. ಕೋಕಿಲಾ ಹಿರೇಮಠ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್. ಬಿ. ಅಣ್ಣಿಗೇರಿ ಸ್ವಾಗತಿಸಿದರು. ಉಪ ನ್ಯಾಸಕ ಬಿ.ಎನ್.ಗಡ್ಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಸ್.ಪಿ. ಹಿರೇತನ ನಿರೂಪಿಸಿದರು. ಎಂ.ಎನ್. ಹತ್ತಿಯವರ ವಂದಿಸಿದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry