ಮಂಗಳವಾರ, ಅಕ್ಟೋಬರ್ 15, 2019
26 °C

ಹೆದ್ದಾರಿಗಳು ಮೇಲ್ದರ್ಜೆಗೆ ಏರಿಕೆ: ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವ

Published:
Updated:

ಬೆಂಗಳೂರು: ವಾಹನ ದಟ್ಟಣೆ ಹೆಚ್ಚಿರುವ ಬೆಂಗಳೂರು- ಮೈಸೂರು ಸೇರಿದಂತೆ ಒಟ್ಟು 21 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಕೋರಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ.ಲೋಕೋಪಯೋಗಿ ಇಲಾಖೆ ಸಲ್ಲಿಸಿರುವ ಈ ಮನವಿಯನ್ನು ಕೇಂದ್ರ ಸರ್ಕಾರ ಒಪ್ಪಿದರೆ, ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಜಾಲ ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಾಗಲಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಪ್ರಸ್ತಾವ ಸಲ್ಲಿಸಿರುವ ರಾಜ್ಯ ಹೆದ್ದಾರಿಗಳ ಒಟ್ಟು ಉದ್ದ 4,031 ಕಿ.ಮೀ. ರಾಜ್ಯದಲ್ಲಿ ಪ್ರಸ್ತುತ 15 ರಾಷ್ಟ್ರೀಯ ಹೆದ್ದಾರಿಗಳಿದ್ದು, ಇವುಗಳ ಒಟ್ಟು ಉದ್ದ 4,490 ಕಿ.ಮೀ. `ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸಿದರೆ ಅವುಗಳ ಗುಣಮಟ್ಟವೂ ಹೆಚ್ಚುತ್ತದೆ.ಅವುಗಳ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ದೊರೆಯಲಿದೆ. ಪ್ರಸ್ತಾವಿತ 21 ರಾಜ್ಯ ಹೆದ್ದಾರಿಗಳ ಪೈಕಿ 15ಕ್ಕಾದರೂ ಕೇಂದ್ರದಿಂದ ಅನುಮತಿ ದೊರೆಯಲಿದೆ~ ಎಂದು ಲೋಕೋಪಯೋಗಿ ಇಲಾಖೆಯ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.ಪ್ರಮುಖ ಮಾರ್ಗಗಗಳ ವಿವರ: ಮೈಸೂರು- ಚನ್ನರಾಯಪಟ್ಟಣ- ಅರಸೀಕೆರೆ (ಹೊಳೆನರಸೀಪುರ ಮಾರ್ಗ), ಬೆಂಗಳೂರು- ಹೊರ ವರ್ತುಲ ರಸ್ತೆ- ದಾಬಸ್‌ಪೇಟೆ- ಸೋಲೂರು- ಮಾಗಡಿ- ರಾಮನಗರ- ಕನಕಪುರ- ಆನೇಕಲ್- ಅತ್ತಿಬೆಲೆ-ಸರ್ಜಾಪುರ, ಬೆಂಗಳೂರು- ರಾಮನಗರ- ಚನ್ನಪಟ್ಟಣ- ಮಂಡ್ಯ- ಮೈಸೂರು- ಮರ್ಕರ- ಮಂಗಳೂರು, ಕೊರಟಗೆರೆ- ತುಮಕೂರು- ಕುಣಿಗಲ್- ಹುಲಿಯೂರುದುರ್ಗ- ಮದ್ದೂರು- ಮಳವಳ್ಳಿ ರಸ್ತೆ, ಬೆಳಗಾವಿ- ಬಾಗಲಕೋಟೆ- ರಾಯಚೂರು- ಮೆಹಬೂಬ್‌ನಗರ- ಆಂಧ್ರಪ್ರದೇಶ ಗಡಿ, ಮಳವಳ್ಳಿ-ಬನ್ನೂರು- ರಾಷ್ಟ್ರೀಯ ಹೆದ್ದಾರಿ 209 ಮತ್ತು 212 ಅನ್ನು ಸಂಪರ್ಕಿಸುವ ಮೈಸೂರು ರಸ್ತೆ.ಹೆಬಸೂರು- ಧಾರವಾಡ- ರಾಮನಗರ (ಲೋಂಡಾ)- ಅನಮೋಡ್- ಪಣಜಿ ರಸ್ತೆ (ರಾಷ್ಟ್ರೀಯ ಹೆದ್ದಾರಿ 17), ಬೆಂಗಳೂರು (ಯಲಹಂಕ)- ಹಿಂದೂಪುರ (ಆಂಧ್ರಪ್ರದೇಶ) (ದೊಡ್ಡಬಳ್ಳಾಪುರ, ಗೌರಿಬಿದನೂರು, ವಿಧುರಾಶ್ವತ್ಥ ಮಾರ್ಗವಾಗಿ), ಮಾನಂದವಾಡಿ- ಎಚ್.ಡಿ. ಕೋಟೆ- ಜಯಪುರ- ಕಡಕೋಳ- ಸುತ್ತೂರು- ಟಿ.ನರಸೀಪುರ- ಕೊಳ್ಳೇಗಾಲ- ಮಹದೇಶ್ವರ ಬೆಟ್ಟ- ಸೇಲಂ ರಸ್ತೆ, ದೊಡ್ಡಬಳ್ಳಾಪುರ- ಕೋಲಾರ ರಸ್ತೆ, ಹಾಸನ- ಗೋರೂರು- ಅರಕಲಗೂಡು- ರಾಮನಾಥಪುರ- ಬೆಟ್ಟದಪುರ- ಪಿರಿಯಾಪಟ್ಟಣ- ಗುಂಡ್ಲುಪೇಟೆ ರಸ್ತೆ.ಬೆಳಗಾವಿ- ವಿಜಾಪುರ- ಗುಲ್ಬರ್ಗ- ಹುಮನಾಬಾದ್, ಕುಮಟಾ- ಶಿರಸಿ- ಮುಂಡಗೋಡು- ತಡಸ- ಹುಬ್ಬಳ್ಳಿ ರಸ್ತೆ, ಕುಮಟಾ- ಶಿರಸಿ- ಹಾವೇರಿ- ಹಡಗಲಿ- ಹರಪನಹಳ್ಳಿ- ಕೂಡ್ಲಿಗಿ, ತಡಸ- ಮುಂಡಗೋಡು- ಹಾನಗಲ್- ಆನವಟ್ಟಿ- ಶಿರಾಳಕೊಪ್ಪ- ಶಿಕಾರಿಪುರ- ಶಿವಮೊಗ್ಗ, ಕುಮಟಾ- ಶಿರಸಿ- ಹಾವೇರಿ- ಕೂಡ್ಲಿಗಿ- ಮೊಳಕಾಲ್ಮೂರು- ಅನಂತಪುರ, ನಂಜನಗೂಡು- ಚಾಮರಾಜನಗರ, ಬೀದರ್- ಹುಮನಾಬಾದ್- ಗುಲ್ಬರ್ಗ- ಸಿರಗುಪ್ಪ- ಬಳ್ಳಾರಿ- ಹಿರಿಯೂರು- ಹುಳಿಯಾರು- ಚಿಕ್ಕನಾಯಕನಹಳ್ಳಿ- ನಾಗಮಂಗಲ- ಶ್ರೀರಂಗಪಟ್ಟಣ.ಅಡವಿ ಸೋಮಪುರ- ಜಗಳೂರು, ಕಲ್ಪೆಟ್ಟ- ಮಾನಂದವಾಡಿ- ಕುಟ್ಟ- ಗೋಣಿಕೊಪ್ಪಲು- ಹುಣಸೂರು- ಮೈಸೂರು, ದೇವನಹಳ್ಳಿ- ವಿಜಯಪುರ- ವೇಮಗಲ್- ಕೋಲಾರ- ಕೆಜಿಎಫ್- ಕೆಂಪಾಪುರ.

Post Comments (+)