ಹೆದ್ದಾರಿ ಕಾಮಗಾರಿಗೆ 6 ಕೋಟಿ

7

ಹೆದ್ದಾರಿ ಕಾಮಗಾರಿಗೆ 6 ಕೋಟಿ

Published:
Updated:

ಕೊಪ್ಪ: ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ 65ರಲ್ಲಿ ಆಯ್ದ ಭಾಗಗಳನ್ನು ರೂ 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು  ಸಚಿವ ಡಿ.ಎನ್.ಜೀವರಾಜ್ ಹೇಳಿದರು. ಇಲ್ಲಿನ ವೀರಭದ್ರ ದೇವಸ್ಥಾನದ ಆವರಣದಲ್ಲಿ ಸೋಮವಾರ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಕ್ತಿಗಣಪತಿ ದೇವಸ್ಥಾನದಿಂದ ಟೋಲ್‌ಗೇಟ್‌ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾವುದು.

ಶೃಂಗೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17 ವಿವಿಧ ರಸ್ತೆಗಳನ್ನು ರೂ 13.87ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಕಟಿಸಿದರು. ಕೊಪ್ಪ ಬಸ್ ನಿಲ್ದಾಣದ ಅಭಿವೃದ್ಧಿಯ ವಿಚಾರದಲ್ಲಿ ಸಲ್ಲದ ಟೀಕೆಗಳು ನೋವುಂಟು ಮಾಡಿದೆ ಎಂದರು.

 ಜಿ.ಪಂ.ಅಧ್ಯಕ್ಷೆ ಸುಚಿತಾ ನರೇಂದ್ರ, ತಾ.ಪಂ.ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷ ನಾರಾಯಣ, ಪ.ಪಂ.ಅಧ್ಯಕ್ಷ ಉಮೇಶ್ ಶೇಟ್, ಉಪಾಧ್ಯಕ್ಷ ವನಜಾ ತಂಗವೇಲು, ತಾ.ಪಂ.ಸದಸ್ಯ ಪೂರ್ಣಚಂದ್ರ, ಜಿ.ಪಂ.ಸದಸ್ಯ ರವೀಂದ್ರ ಕುಕ್ಕುಡಿಗೆ, ಅನ್ನಪೂರ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry