ಹೆದ್ದಾರಿ ವಿಸ್ತರಣೆ ಕಾರ್ಯ ನಿರ್ವಿಘ್ನ

7

ಹೆದ್ದಾರಿ ವಿಸ್ತರಣೆ ಕಾರ್ಯ ನಿರ್ವಿಘ್ನ

Published:
Updated:
ಹೆದ್ದಾರಿ ವಿಸ್ತರಣೆ ಕಾರ್ಯ ನಿರ್ವಿಘ್ನ

ಶಹಾಪುರ: ನಿರೀಕ್ಷೆಯಂತೆ ಬೆಳಿಗ್ಗೆ ಆರು ಗಂಟೆಗೆ ಪೊಲೀಸ್ ಪಡೆಯೊಂದಿಗೆ ಗುರುವಾರ ರಾಜ್ಯ ಹೆದ್ದಾರಿಯ ಒತ್ತುವರಿ ತೆರವು ಕಾರ್ಯಚರಣೆಗೆ ಬುಲ್ಡೋಜ್‌ರಗಳು ಸದ್ಧು ಮಾಡುತ್ತಾ ಅಕ್ರಮದ ಕಟ್ಟಡಕ್ಕೆ ತನ್ನ ಕೆನ್ನಾಲಿಗೆ ಹಾಕಿ ನೆಲಸಮ ಕಾರ್ಯ ಭರದಿಂದ ಸಾಗಿತು. ಸಾಕಷ್ಟು ಮುಂಜಾಗ್ರತಾ ಕ್ರಮವಾಗಿ ಪುರಸಭೆಯು ಅತಿಕ್ರಮ ಮಾಡಿಕೊಂಡ ವ್ಯಾಪಾರಸ್ತರಿಗೆ ನೋಟಿಸು  ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆಗೆದು ಹಾಕುವಂತೆ ತಿಳಿಸಿದ್ದರಿಂದ ಸ್ವಯಂಪ್ರೇರಣೆಯಿಂದ ತೆರವುಗೊಳಿಸಿದ್ದರು.

 

ಸಮೀಕ್ಷೆ ಮಾಡಿ ಗಡಿ ಗುರತುಗಳ ನೇರಕ್ಕೆ  ಒಡೆದು ಹಾಕಲಾದ ಕಟ್ಟಡಗಳು ನೆಲಕ್ಕುರಳಿದವು. ಹಾಳು ಬಿದ್ದ ಪ್ರದೇಶದಂತೆ ಕಾಣುತ್ತಿತ್ತು. ಪಟ್ಟಣದ ಜನತೆ ಭಾರಿ ಕುತೂಹಲದಿಂದ ತೆರವು ಕಾರ್ಯಚರಣೆ ನೋಡು ವುದು ಸಾಮಾನ್ಯವಾಗಿತ್ತು. ಹೆದ್ದಾರಿಯ ಅಕ್ಕಪಕ್ಕದಲ್ಲಿ ಹೆಚ್ಚಾಗಿ ಸಣ್ಣ ಅಂಗಡಿ ಮುಂದುಗಡೆ ಟಿನ್ ಶೇಡ್ ಗಳನ್ನು ತೆಗೆದು ಹಾಕಿದರು. ಸಾರ್ವಜನಿಕರಿಂದ ಯಾವುದೇ ಪ್ರತಿ ರೋಧವಾಗಲಿ ಇಲ್ಲವೆ ವಿರೋಧ ಕಂಡು ಬರಲಿಲ್ಲ.

 

ಸಾಮಾನ್ಯ ಜನ ತೆಯು ಜಿಲ್ಲಾಧಿಕಾರಿಯ ಕ್ರಮವನ್ನು ಶ್ಲಾಘಿಸಿದರೆ ನೋವುಂಡ ಜನತೆ ಮೌನಕ್ಕೆ ಶರಣಾಗಿದ್ದರು. ತಡೆ: ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠದಿಂದ ತಾತ್ಕಾಲಿಕವಾಗಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ನಾಲ್ಕು ಅಂಗಡಿಗಳನ್ನು ಹೊರತುಪಡಿಸಿ ಪಟ್ಟಣದ ರಾಕಂಗೇರಾದಿಂದ ಭೀಮರಾಯನಗುಡಿಯವರೆಗೂ 50 ಅಡಿ ಮುಖ್ಯ ರಸ್ತೆಯ ಕೇಂದ್ರದಿಂದ ನಿರಂತರವಾಗಿ ತೆರವು ಕಾರ್ಯಚರಣೆ ಸಾಗಿತು.ಲಿಂಗಾಯತ ಸಮುದಾಯ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸ್ವಾಪಿಸಲಾಗಿರುವ ಬಸವೇಶ್ವರ ನಾಮಫಲಕವನ್ನು ಕಿತ್ತು ಹಾಕುವ ಸೂಚನೆ ಅರಿತ ವೀರಶೈವ ಲಿಂಗಾಯತ ಸಮುದಾಯದವರು ಜಿಲ್ಲಾಧಿಕಾರಿಗೆ ಭೇಟಿಯಾಗಿ ಮನವಿ ಸಲ್ಲಿಸಿದರು. ತಕ್ಷಣ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಇನ್ನೂ ಮೂರು ದಿನಗಳ ಕಾಲಾ ವಕಾಶ ನೀಡಿ ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸಲಾಗುವುದೆಂದು ಭರವಸೆ ನೀಡಿದರು.ದಲಿತ ಸಮುದಾಯ: ಚರ ಬಸವೇಶ್ವರ ಕಮಾನಿನ ಬಳಿ ಇರುವ ಡಾ.ಅಂಬೇಡ್ಕರ ಕಟ್ಟೆಯನ್ನು ತೆಗೆದು ಹಾಕವ ಯತ್ನದ ಬಗ್ಗೆ ತಿಳಿದ ದಲಿತ ಸಮುದಾಯದ ಮುಖಂಡರು ಮೊದಲು ಕಟ್ಟೆಯ ಜಾಗವನ್ನು ನಿಗದಿ ಪಡಿಸಿ ನಂತರ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ದರು. ಆಗ ಮೊದಲು ಕಟ್ಟೆಯ ಜಾಗ ವನ್ನು ತೆರವುಗೊಳಿಸುವುದು ನಂತರ ಎಲ್ಲರೂ ಒಟ್ಟಿಗೆ ಕೂಡಿಕೊಂಡು ಸೂಕ್ತ ಸ್ಥಳ ವನ್ನು ಪರಿಶೀಲಿಸಿ ನಿರ್ಮಿಸೋಣ ಎಂದು ಜಿಲ್ಲಾಧಿಕಾರಿ ಹೇಳಿದಾಗ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಸಾರ್ವಜನಿಕರ ಅನುಕೂಲಕ್ಕಾಗಿ ಅಭಿವೃದ್ಧಿ ಕೆಲಸಗಳನ್ನು ತೆಗೆದುಕೊಳ್ಳ ಲಾಗುತ್ತಿದೆ. ರಸ್ತೆ ಇಕ್ಕಟ್ಟಾಗುವುದ ರಿಂದ ಪಾದಚಾರಿ, ರಸ್ತೆ ಅಪಘಾತ ಹೀಗೆ ಹಲವು ಸಮಸ್ಯೆಗಳು ಉಂಟಾ ಗಿವೆ. ಸುರಕ್ಷಿತ ಹಾಗೂ ಸಾರ್ವಜನಿಕರ ಒಳಿತಿಗಾಗಿ ಕಾರ್ಯ ವನ್ನು ಕೈಗೆತ್ತಿ ಕೊಳ್ಳಲಾಗಿದೆ ಜನತೆ ಸಹಕಾರ ಅವಶ್ಯಕವೆಂದು ಜಿಲ್ಲಾಧಿಕಾರಿ ತಿಳಿಸಿದರು. ರಸ್ತೆ ಅಗಲಿಕರಣದ ನಂತರ ಅವ ಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾ ಗುತ್ತದೆ. ಹಣಕಾಸಿನ ಕೊರೆತೆಯಿಲ್ಲ. ಮತ್ತೇ ರಸ್ತೆ ಅತಿಕ್ರಮಣವಾಗಲಿ ಇಲ್ಲವೆ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾ ಗುತ್ತದೆ.ಇದಕ್ಕಾಗಿ ನಾಲ್ಕು ಜನರ ತಂಡವನ್ನು ರಚಿಸಲಾಗಿದೆ. ಸಾರ್ವಜ ನಿಕರು ನೆರವು ನೀಡಬೇಕೆಂದು ಅವರು ಕೋರಿದರು. ಬರುವ ದಿನಗಳಲ್ಲಿ ಎರಡನೇ ಹಂತದ ಕಾರ್ಯವನ್ನು ಕೈಗೆತ್ತಿ ಕೊಂಡು ಉಳಿದ ರಸ್ತೆಗಳ ಒತ್ತುವರಿ ಕಾರ್ಯಚರಣೆ ನಡೆಸಲಾಗುವುದು, ಉದ್ಯಾನ ಜಾಗ ಕಬಳಿಕೆಯ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು ಹಂತ ಹಂತವಾಗಿ ತೆರವುಗೊಳಿಸಲಾಗು ವುದೆಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry