ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

7

ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಒತ್ತಾಯ

Published:
Updated:

ಆಳಂದ:  ವಾಗ್ದರಿ ಮತ್ತು ರಿಬ್ಬನ್‌ಪಲ್ಲಿ ಹೆದ್ದಾರಿಗೆ ಬರುವ ಶಕಾಪೂರ ಹಾಗೂ ಮಳಖೇಡ ಸೇತುವೆ ತೀರಾ ಹಳೆಯದಾಗಿವೆ. ಈಗಾಗಲೇ ಕೈಗೆತ್ತಿಕೊಂಡ ಈ ಹೆದ್ದಾರಿ ಕಾಮಗಾರಿಯ ಜೊತೆಗೆ ಈ ಎರಡೂ ಸೇತುವೆಗಳು ನಿರ್ಮಸಬೇಕು ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿರುವ ಅವರು, ವಾಗ್ದರಿ-ರಿಬ್ಬನ್‌ಪಲ್ಲಿ ಜಿಲ್ಲೆಯ ಮಹತ್ವದ ಹೆದ್ದಾರಿಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಈ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 241 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣಕ್ಕೆ 224ಕೋಟಿ ವೆಚ್ಚದಲ್ಲಿ ಆಂಧ್ರ-ಮಹಾರಾಷ್ಟ್ರದ ಸಂಪರ್ಕ ಜೋಡಿಸುವ ಅತ್ಯಂತ ಮಹತ್ವದ ರಸ್ತೆ ಖಾಯಂ ಆಗಿ ಬಾಳುವಂತೆ ಆಗಬೇಕಾದರೆ ಶಕಾಪುರ ಹಾಗೂ ಮಳಖೇಡ ಸೇತುವೆಗಳು ಸಹ ಹೊಸದಾಗಿ ನಿರ್ಮಿಸಬೇಕು. ಈ ಸೇತುವೆ ರಸ್ತೆ ಕಾಮಗಾರಿ ಯೋಜನೆಗೆ ಸೇರಿಲ್ಲ ಎಂದು ವಿವರಿಸಿದ್ದಾರೆ.ಎರಡೂ ಸೇತುವೆಗಳ ಅರ್ಧ ಶತಕಗಳಿಂದಲೂ ನೆನಗುದ್ದಿಗೆ ಬಿದ್ದಿವೆ. ರಸ್ತೆ ಪುನರ್‌ನಿರ್ಮಾಣದ ಸಂದರ್ಭದಲ್ಲೇ ಹೊಸದಾಗಬೇಕು. ಮಳಖೇಡ ಸೇತುವೆ ಕಾಗಿಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಶಕಾಪೂರ ಸೇತುವೆ ಅಮರ್ಜಾ ನದಿಗೆ ಅಡ್ಡಲಾಗಿ ಕಟ್ಟಲಾದ ಹಳೆಯ ಸೇತುವೆಗಳು ಈ ಯೋಜನೆಗೆ ಸೇರಿಲ್ಲ. ಬರಿ ದೊಡ್ಡ ಪ್ರಮಾಣದ ದುರಸ್ತಿ ಕಾರ್ಯ ಇಟ್ಟುಕೊಳ್ಳಲಾಗಿದೆ. ಆದರೆ ಹೊಸ ರಸ್ತೆಗೆ ಹಳೆ ಸೇತುವೆಗಳ ಇಟ್ಟುಕೊಂಡರೆ ಕೆಲವೇ ವರ್ಷಗಳಲ್ಲಿ ಅದರ ಶಕ್ತಿ ಕಡಿಮೆಯಾಗಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿದು ಹೋಗುವ ಸಾಧ್ಯತೆ ಇರುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಕುರಿತು ಗಂಭೀರವಾಗಿ ಚಿಂತಿಸಿ ಬರುವ 2011-12ರ ಬಜೇಟ್‌ನಲ್ಲಿ ಈ ಎರಡೂ ಸೇತುವೆಗಳಿಗೆ ಹೊಸದಾಗಿ ಹೆಚ್ಚುವರಿ ಅನುದಾನ ಒದಗಿಸಿ, ಬೇಕಾದರೆ ಕಾಮಗಾರಿ ಇದೇ ಗುತ್ತಿಗೆದಾರರಿಗೆ ಕೊಡಬಹುದು ಅಥವಾ ಬೇರೊಬ್ಬರಿಗೆ ವಹಿಸಬಹುದಾಗಿದೆ. ಇದರಿಂದ ಭವಿಷ್ಯದಲ್ಲಿ ಈ ಐತಿಹಾಸಿಕ ಕಾರ್ಯ ಶಾಶ್ವತವಾಗಿ ಉಪಯೋಗಕ್ಕೆ ಬರುತ್ತದೆ ಎಂದು ಪಾಟೀಲ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry