ಶುಕ್ರವಾರ, ಮಾರ್ಚ್ 5, 2021
27 °C
22 ನಾಮಪತ್ರಗಳು ಸಮರ್ಪಕ

ಹೆಬ್ಬಾಳ ಉಪಚುನಾವಣೆ ಇಬ್ಬರ ನಾಮಪತ್ರ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ಬಾಳ ಉಪಚುನಾವಣೆ ಇಬ್ಬರ ನಾಮಪತ್ರ ತಿರಸ್ಕೃತ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. 22 ಅಭ್ಯರ್ಥಿಗಳ ನಾಮಪತ್ರಗಳು ಸಮರ್ಪಕವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ನಾಮಪತ್ರಗಳನ್ನು ಗುರುವಾರ ಪರಿಶೀಲಿಸಿದ್ದೇವೆ. ತಮಿಳುನಾಡಿನ ಸೇಲಂ ಜಿಲ್ಲೆಯ ರಾಮನಗರದ  ಡಾ. ಕೆ. ಪದ್ಮರಾಜನ್‌ ಅವರು ನಾಮಪತ್ರದಲ್ಲಿ  ಸೂಚಕರ ಹೆಸರನ್ನು ಉಲ್ಲೇಖಿಸಿರಲಿಲ್ಲ. 

ನೆಲಮಂಗಲದ ಗಜೇರಿಯಾ ಬಡಾವಣೆ ನಿವಾಸಿ ಎಂ.ಕೆ.ಪಾಷ ಅವರು ಮತದಾರರ ಪಟ್ಟಿಯ ಕುರಿತ ದಾಖಲೆಗಳನ್ನು ಒದಗಿಸಿರಲಿಲ್ಲ ಹಾಗಾಗಿ ಇವರಿಬ್ಬರ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ’ ಎಂದು ಚುನಾವಣಾಧಿಕಾರಿ ಎಂ.ಶಿಲ್ಪಾ ಅವರು ತಿಳಿಸಿದರು.‘ಎಸ್‌ಡಿಪಿಐ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬೆಂಗಳೂರಿನ ಚಾಮುಂಡಿನಗರದ ಮೊಹಮ್ಮದ್‌ ಅಯೂಬ್‌ ಅವರು ಪಕ್ಷದಿಂದ ಬಿ–ಫಾರಂ ಸಲ್ಲಿಸಿಲ್ಲ. ಆದರೆ, ಅವರು ಸಲ್ಲಿಸಿದ್ದ ಇತರ ದಾಖಲೆಗಳು ಸಮರ್ಪಕವಾಗಿವೆ. ಹಾಗಾಗಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲಾಗುತ್ತದೆ’ ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.