ಹೆಬ್ಬಾಳ ಬಳಿ .ಟಾಟಾ ಮೋಟಾರ್ಸ್‌

7

ಹೆಬ್ಬಾಳ ಬಳಿ .ಟಾಟಾ ಮೋಟಾರ್ಸ್‌

Published:
Updated:
ಹೆಬ್ಬಾಳ ಬಳಿ .ಟಾಟಾ ಮೋಟಾರ್ಸ್‌

ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್‌ನ 248ನೇ ಶೋರೂಂ ‘ಆದ್ಯ’ ಹೆಬ್ಬಾಳ ಬಳಿ ವೀರಣಪಾಳ್ಯದ ಸರ್ವೀಸ್ ರಿಂಗ್ ರಸ್ತೆಯಲ್ಲಿ ಲುಂಬಿನಿ ಪಾರ್ಕ್ ಎದುರು ಆರಂಭವಾಗಿದೆ.5 ಸಾವಿರ ಚದರ ಅಡಿ ಪ್ರದೇಶದಲ್ಲಿ ಹರಡಿಕೊಂಡ ಈ ವಿಶಾಲ ಶೋರೂಂನಲ್ಲಿ 150 ಜನ ನುರಿತ ಸಿಬ್ಬಂದಿ ಇದ್ದಾರೆ. ನವನವೀನ ಕಾರುಗಳು ಮತ್ತು ಬಿಡಿಭಾಗಗಳ ಮಾರಾಟದ ಜೊತೆಗೆ ಸೇವಾ ಸೌಲಭ್ಯ ಒಳಗೊಂಡಿದೆ.ಟಾಟಾ ಮೋಟಾರ್ಸ್‌ನ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಆರ್. ರಾಮಕೃಷ್ಣನ್ ಶೋರೂಂ ಉದ್ಘಾಟಿಸಿ, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಜನರ ಬೇಡಿಕೆ ಮನಗಂಡು ಈ ಮಳಿಗೆ ಆರಂಭಿಸಲಾಗಿದೆ. ಆರಾಮದಾಯಕ ಪ್ರಯಾಣ ಮತ್ತು ಹೆಚ್ಚು ಇಂಧನ ಕ್ಷಮತೆಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು.ನ್ಯಾನೊ ಕಾರುಗಳಿಗೆ ಸಾಕಷ್ಟು ಬೇಡಿಕೆಯಿದೆ. ಆದ್ದರಿಂದ ಇನ್ನು ಮುಂದೆ ಪ್ರತಿ ತಿಂಗಳು 20 ಸಾವಿರ ನ್ಯಾನೋ ಕಾರು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.ಟಾಟಾ ಮೋಟಾರ್ಸ್‌ನ ಎಂ.ಸಂಜಯ, ಪಿ.ಡಿ. ಫಡ್ನಿಸ್, ಪ್ರಶಾಂತ ಸಿಬ್ಬಲ್ ಮತ್ತಿತರರು ಹಾಜರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry