ಮಂಗಳವಾರ, ಏಪ್ರಿಲ್ 20, 2021
30 °C

ಹೆಬ್ರಿಯಲ್ಲಿ ಮೆಸ್ಕಾಂ ಉಪ ವಿಭಾಗ ಕಚೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: ಪರಿಸರದ ಜನತೆಯ ಬಹುವರ್ಷದ ಕನಸಾದ ಮೆಸ್ಕಾಂ ಸಬ್ ಡಿವಿಜನ್ ಕಚೇರಿ ಮಂಜೂರಾಗಿದ್ದು, ಕನಸು ಕೊನೆಗೂ ನನಸಾಗಿದೆ.ಹೆಬ್ರಿಯ ಮೆಸ್ಕಾಂ ಸಬ್ ಡಿವಿಜನ್‌ಗೆ ನೂತನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಪ್ರತಾಪ ಶೆಟ್ಟಿ ಈಗಾಗಲೇ ಅಧಿಕಾರ ಸ್ವೀಕಾರಿಸಿದ್ದಾರೆ. ಸುಸಜ್ಜಿತ ಕಚೇರಿ ಕಟ್ಟಡದ ಹುಡುಕಾಟ ಆರಂಭಗೊಂಡಿದ್ದು, ಹೆಬ್ರಿಯ ಹೃದಯ ಭಾಗದಲ್ಲಿರುವ ಹಾಲು ಡೇರಿಯ ಕಟ್ಟಡದಲ್ಲಿ ಬಹುತೇಕ ಕಚೇರಿ ಆರಂಭವಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.ಕಾರ್ಕಳ ಮೆಸ್ಕಾಂ ಉಪ ವಿಭಾಗದಿಂದ ಹೆಬ್ರಿಯು ಪ್ರತ್ಯೇಕ ಉಪ ವಿಭಾಗವಾಗಿ ರೂಪುಗೊಂಡಿರುವುದು ಇಲ್ಲಿನ ಜನತೆಗೆ ಸಂತಸ ತಂದಿದೆ. ದೂರದ ಕಾರ್ಕಳಕ್ಕೆ ತೆರಳಿ ಮಾಡಿಸಬೇಕಾದ ಕೆಲಸಗಳು ಇನ್ನೂ ಹೆಬ್ರಿಯಲ್ಲೇ ಆಗುತ್ತಿರುವುದು ಹರ್ಷಕ್ಕೆ ಕಾರಣವಾಗಿದೆ.ಕಳೆದ ಎರಡು ವರ್ಷಗಳ ಹಿಂದೆ ಇಂಧನ ಇಲಾಖೆ ಮೆಸ್ಕಾಂ ವ್ಯಾಪ್ತಿಯೊಳಗೆ ಹೆಬ್ರಿಯಲ್ಲಿ ಮೆಸ್ಕಾಂ ಸಬ್ ಡಿವಿಜನ್ ಕಚೇರಿ ತೆರೆಯಲು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಕಾರ್ಕಳ ನಗರ ಮತ್ತು ಅರ್ಬನ್ ಮೆಸ್ಕಾಂ ಸಬ್ ಡಿವಿಜನ್ ಕಚೇರಿ ತೆರೆಯಲು ಅವಕಾಶವಿದೆ ಎಂದು ಉಡುಪಿ ಮುಖ್ಯ ಡಿವಿಜನ್ ವರದಿ ನೀಡಿತ್ತು.ವರದಿ ಪರಿಶೀಲಿಸಿದ ಇಂಧನ ಇಲಾಖೆಯ ಉನ್ನತಾಧಿಕಾರಿಗಳು ಹೆಬ್ರಿ ಮತ್ತು ಬೈಲೂರನ್ನು ಕೇಂದ್ರವಾಗಿಟ್ಟುಕೊಂಡು  ಸಬ್ ಡಿವಿಜನ್ ತೆರೆಯಲು ಹಸಿರು ನಿಶಾನೆ ತೋರಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಹೆಬ್ರಿಗೆ ಸಬ್ ಡಿವಿಜನ್ ಕಚೇರಿ ಮಂಜೂರಾಗಿದ್ದರೂ ಆರಂಭಿಸಲು ಇಲಾಖೆ ಮೀನಮೇಷ ಎಣಿಸಿ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಶಾಸಕರು ಎಷ್ಟೇ ಪ್ರಯತ್ನ ಪಟ್ಟರೂ ಅಧಿಕಾರಿಗಳು ಆರಂಭಿಸುತ್ತೇವೆ ಎಂಬ ಉತ್ತರ ನೀಡುತ್ತ 2 ವರ್ಷ ಕಳೆಯಿತು. ಇದೀಗ ಹೆಬ್ರಿ ಕೇಂದ್ರ ಸ್ಥಾನ ಹೊಂದಿ ಕಾರ್ಕಳ ತಾಲ್ಲೂಕಿನ ಅಜೆಕಾರಿನ, ಉಡುಪಿ ತಾಲ್ಲೂಕಿನ ಪೆರ್ಡೂರು ಮತ್ತು ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದ ಸ್ವಲ್ಪ ಭಾಗ ಸೇರಿ ಉಪ ವಿಭಾಗ ಕಚೇರಿ ರೂಪುಗೊಂಡಿದೆ.ಹೆಬ್ರಿಯ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಕಂದಾಯ ಶಾಖೆ, ಸರ್ವಿಸ್ ಸೆಕ್ಷನ್, ಒಂದು ಜೀಪ್, ಒಂದು ಲಾರಿ, ಅಲ್ಲದೆ ಸೆಕ್ಷನ್ ಕಚೇರಿ ಒಳಗೊಂಡು ಇಬ್ಬರು ಜೂನಿಯರ್ ಎಂಜಿನಿಯರ್ ಮತ್ತು ಮುಖ್ಯಸ್ಥರಾಗಿ ಒಬ್ಬ  ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಾರೆ.ಅಲ್ಲದೆ ವಿದ್ಯುತ್ ಬಿಲ್ಲು ಕಟ್ಟಲು ಪ್ರತ್ಯೇಕವಾದ ಹಗಳಿರುಳ ಸೇವೆಯೂ ಇಲ್ಲಿ ಜನತೆಗೆ ಲಭ್ಯವಾಗುತ್ತದೆ. ಇನ್ನೂ ಜನತೆಗೆ ತಾಲ್ಲೂಕಿನಲ್ಲಿ ಆಗುವ ಮೆಸ್ಕಾಂಗೆ ಸಂಭಂದಿಸಿದ ಎಲ್ಲಾ ಕೆಲಸಗಳು ಹೆಬ್ರಿಯಲ್ಲೇ ಅಗಲಿದ್ದು, ಹೆಚ್ಚಿನ ಅವಶ್ಯ ಕೆಲಸಗಳಿಗೆ ಮಾತ್ರ ಡಿವಿಜನ್ ಕಚೇರಿ ಉಡುಪಿಗೆ ತೆರಳಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೆಬ್ರಿಯಲ್ಲಿ ಮೆಸ್ಕಾಂ ಸಬ್ ಡಿವಿಜನ್ ಕಚೇರಿ ಸೇವೆಗೆ ತೆರೆದುಕೊಳ್ಳಲಿದೆ.ಇಂಧನ ಇಲಾಖೆಯು ಹೆಬ್ರಿಯಲ್ಲಿ ಮೆಸ್ಕಾಂ ಉಪ ವಿಭಾಗ ಕಚೇರಿ ಆರಂಭ ಮಾಡುವ ಪ್ರಯತ್ನದಿಂದ, ಬಳಿಕ ಮೀನಾಮೇಷ ಎಣಿಸಿ ವಿಳಂಬ ಧೋರಣೆ ತಳೆದಿರುವುದು ಸೇರಿ ಇಲ್ಲಿವರೆಗೆ ನಡೆದ ಬಹುತೇಕ ಪ್ರಕ್ರಿಯೆನ್ನು `ಪ್ರಜಾವಾಣಿ~ ಗಮನ ಸೆಳೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.