ಶನಿವಾರ, ನವೆಂಬರ್ 23, 2019
18 °C
ಹೆಬ್ರಿ ಲಯನ್ಸ್ ದಶಮಾನೋತ್ಸವ ಆಚರಣೆಗೆ ಚಾಲನೆ

ಹೆಬ್ರಿ ಲಯನ್ಸ್ ಸೇವೆ: ಹೆಗ್ಡೆ ಶ್ಲಾಘನೆ

Published:
Updated:

ಹೆಬ್ರಿ: ಹೆಬ್ರಿಯ ಸಿಟಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಜನೋಪಯೋಗಿ ಕಾರ್ಯ ಮಾಡುತ್ತಿದ್ದು, ಅತ್ಯುನ್ನತ ಸೇವೆಯಲ್ಲಿ ತೊಡಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮಧುಸೂದನ್ ಹೆಗ್ಡೆ ಶ್ಲಾಘಿಸಿದರು.ಹೆಬ್ರಿ ಸಿಟಿ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ಗೆ ಭಾನುವಾರ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಆರೋಗ್ಯ ಶಿಕ್ಷಣ ಮತ್ತು ಸಮಾಜಿಕ ಸೇವೆಗೆ ವಿವಿಧ ಕೊಡುಗೆಗಳನ್ನು ವಿತರಿಸಲಾಯಿತು. ದಶಮಾನೋತ್ಸವ ಸಂಭ್ರಮದಲ್ಲಿರುವ ಹೆಬ್ರಿ ಸಿಟಿ ಲಯನ್ಸ್ ಮತ್ತು ಲಯನೆಸ್ ಕ್ಲಬ್‌ನ ದಶಮಾನೋತ್ಸವ ಸಂಭ್ರಮದ ವರ್ಷಾಚರಣೆಯನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.ವಿವಿಧ ಕ್ಷೇತ್ರಗಳ ಸಾಧಕರಾದ ಭೂತುಗುಂಡಿ ಕರುಣಾಕರ ಶೆಟ್ಟಿ, ಯಕ್ಷಗಾನ ಬಾಲ ಕಲಾವಿದೆ ಮಂಡಾಡಿಜೆಡ್ಡು ಸ್ವಾತಿ ಅಣ್ಣಪ್ಪ ಕುಲಾಲ್, ಲಯನ್ಸ್ ಕ್ಲಬ್ ಸದಸ್ಯರಾದ ಮೂರ‌್ಸಾಲು ಮೋಹನದಾಸ ನಾಯಕ್, ಎಚ್. ಕೆ. ನಾರಾಯಣ ನಾಯಕ್, ಗುಂಡೂನಾಯಕ್, ಮೋಹನ ಹೆಬ್ಬಾರ್ ಸೇರಿ ಹಲವರನ್ನು ಸನ್ಮಾನಿಸಲಾಯಿತು.ಕ್ಲಬ್‌ನ ಅತ್ಯುತ್ತಮ ಸೇವೆಗಾಗಿ ಲಯನ್ಸ್ ಅಧ್ಯಕ್ಷ ಸೀತಾನದಿ ಚಂದ್ರಶೇಖರ ಶೆಟ್ಟಿ ಅವರನ್ನು ಗವರ್ನರ್ ಡಾ.ಮಧುಸೂದನ್ ಹೆಗ್ಡೆ ಸನ್ಮಾನಿಸಿದರು. ಲಯನೆಸ್ ಕ್ಲಬ್ ಅಧ್ಯಕ್ಷೆ ವಸುಧಾ ಎನ್. ಪ್ರಭು ಅವರನ್ನು ಶೋಭಾ ಮಧುಸೂದನ್ ಹೆಗ್ಡೆ ಸನ್ಮಾನಿಸಿದರು.

ಬೇಳಂಜೆ ಸತೀಶ ಶೆಟ್ಟಿ, ಗಂಗಾಧರ ಹೆಗ್ಡೆ, ತುಳಸಿ ಹರೀಶ್ ಸೇರಿ ಹಲವರನ್ನು ಗೌರವಿಸಲಾಯಿತು.ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಾಬರ್ಟ್ ಪುಟಾರ್ಡೋ, ಜಿಲ್ಲಾ ಪ್ರಮುಖರಾದ ಸತ್ಯಾನಂದ ನಾಯಕ್,ಶ್ರೀಧರ ಸೆಣವ, ವಿಜಯ ಬಂಗೇರ, ಶೋಭಾ ಮಧುಸೂದನ ಹೆಗ್ಡೆ, ಎಂ.ಎಸ್.ಹೆಗ್ಡೆ, ಹೆಬ್ರಿ ಲಯನ್ಸ್ ಕೋಶಾಧಿಕಾರಿ ಜಗದೀಶ ನಾಯಕ್, ಪ್ರಮುಖರಾದ ಟಿ.ಜಿ.ಆಚಾರ್ಯ, ಡಾ.ನರಸಿಂಹ ನಾಯಕ್, ನರಸಿಂಹ ಪ್ರಭು, ರಮೇಶ ಆಚಾರ್ಯ, ಲಯನೆಸ್ ಕ್ಲಬ್ ಅಧ್ಯಕ್ಷೆ ವಸುಧಾ ಪ್ರಭು, ಕಾರ್ಯದರ್ಶಿ ಶೀಲಾ ಚಂದ್ರಶೇಖರ ಶೆಟ್ಟಿ,ಕೋಶಾಧಿಕಾರಿ ಶೋಭಾ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)