ಗುರುವಾರ , ನವೆಂಬರ್ 21, 2019
20 °C

ಹೆಬ್ರಿ: ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕರಿಗೆ ಸನ್ಮಾನ

Published:
Updated:

ಹೆಬ್ರಿ: ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಹಲವು ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಹೆಬ್ರಿ ಶಾಖಾ ಹಿರಿಯ ಪ್ರಬಂಧಕರಾಗಿ ನಿವೃತ್ತರಾದ ಬಿ. ರಾಘವ ನಾಯಕ್ ಅವರ ಬೀಳ್ಕೊಡುಗೆ ಸಮಾರಂಭ ಶನಿವಾರ ಹೆಬ್ರಿ ಸಿಂಡಿಕೇಟ್ ಬ್ಯಾಂಕ್ ವಠಾರದಲ್ಲಿ ನಡೆಯಿತು.ಉದ್ಯಮಿ ವಸಂತ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಘವ ನಾಯಕ್ ದಂಪತಿಯನ್ನು ಸನ್ಮಾನಿಸಲಾಯಿತು. ಹೆಬ್ರಿಯ ಉದ್ಯಮಿಗಳಾದ ಎಚ್. ಸತೀಶ್ ಪೈ, ಯೋಗೀಶ್ ಭಟ್, ಸಿಬ್ಬಂದಿ ಪರವಾಗಿ ಹರೀಶ್ ಮಾತನಾಡಿ ಪ್ರಬಂಧಕರ ಸೇವೆಯನ್ನು ಸ್ಮರಿಸಿದರು.ಸಮಾರಂಭದಲ್ಲಿ ರಾಘವ ನಾಯಕ್, ಪ್ರಭಾವತಿ ಆರ್ ನಾಯಕ್, ಬ್ಯಾಂಕಿನ ಸಹಾಯಕ ಪ್ರಬಂಧಕ ರಾಜನ್ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿ ದಿನೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರತಿಕ್ರಿಯಿಸಿ (+)