ಹೆರಂಜೆಗೆ ಎಸ್‌ವಿಪಿ ಪ್ರಶಸ್ತಿ

7

ಹೆರಂಜೆಗೆ ಎಸ್‌ವಿಪಿ ಪ್ರಶಸ್ತಿ

Published:
Updated:
ಹೆರಂಜೆಗೆ ಎಸ್‌ವಿಪಿ ಪ್ರಶಸ್ತಿ

ಮಂಗಳೂರು: ಕನ್ನಡದ ಹಿರಿಯ ಸಂಶೋಧಕ ಪ್ರೊ.ಹೆರಂಜೆ ಕೃಷ್ಣ ಭಟ್ ಅವರು ಈ ಬಾರಿಯ ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ 10 ಸಾವಿರ   ನಗದು ಒಳಗೊಂಡಿದೆ.ಇದೇ 16ರಂದು ಸಂಜೆ 5ಕ್ಕೆ ಕಾರ್ಕಳದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಥೆ, ಕಾವ್ಯ, ಸಂಶೋಧನೆ, ಪ್ರಕಟಣೆ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇದುವರೆಗೆ 11 ಮಂದಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry