ಹೆರಿಗೆ ವೇಳೆ ಮಹಿಳೆ ಸಾವು /ವೈದ್ಯರ ನಿರ್ಲಕ್ಷ್ಯಆರೋಪ: ಪ್ರತಿಭಟನೆ

7

ಹೆರಿಗೆ ವೇಳೆ ಮಹಿಳೆ ಸಾವು /ವೈದ್ಯರ ನಿರ್ಲಕ್ಷ್ಯಆರೋಪ: ಪ್ರತಿಭಟನೆ

Published:
Updated:

ಹಾಸನ: ಇಲ್ಲಿನ ಜಿಲ್ಲಾಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಆಶಾ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತಳ ಸಂಬಂಧಿಕರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಹಿಳೆಯ ಶವ ಇಟ್ಟು ಪ್ರತಿಭಟನೆ ನಡೆಸಿದರು.

 

ಆಲೂರು ತಾಲ್ಲೂಕಿನ ಕದಾಳು ಚನ್ನಾಪುರ ಗ್ರಾಮದ ಪ್ರಕಾಶ್ ಪತ್ನಿ ಆಶಾ(26) ಅವರು ವೈದ್ಯರ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ ಮೃತಳ ಸಂಬಂಧಿಕರು ಹೆರಿಗೆ ವೈದ್ಯೆ ಪ್ರೇಮಲತಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು. ಆಶಾ ಅವರನ್ನು ಆಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಹಾಸನಕ್ಕೆ ಕೊಂಡೊಯ್ಯಲು ಸೂಚಿಸಿದರು. ಆಲೂರಿನ ವೈದ್ಯರ ಸೂಚನೆಯಂತೆ ಕೂಡಲೇ ಆಶಾ ಅವರನ್ನು ಗುರುವಾರ ಬೆಳಿಗ್ಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಇಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರಿಂದ ಆಶಾ ಮೃತಪಟ್ಟಿದ್ದಾರೆ. ಆಶಾ ಗಂಡು ಮಗುವಿಗೆ ಜನ್ಮನೀಡಿ ಮೃತಪಟ್ಟಿದ್ದು ಮಗುವಿನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಮೋಹನ್‌ರಾಜ್ ಮಾತನಾಡಿ, ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry