ಬುಧವಾರ, ಜೂನ್ 16, 2021
22 °C

ಹೆಲಿಕಾಪ್ಟರ್‌ ಖರೀದಿ ಹಗರಣ: ರೂ. 2,134 ಕೋಟಿ ವಶಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಅತಿಗಣ್ಯ­ರಿಗಾಗಿ 12 ಹೆಲಿಕಾಪ್ಟರ್‌ ಪೂರೈಸಲು ಇಟಲಿಯ ಆಗಸ್ಟಾ ವೆಸ್‌್ಟಲ್ಯಾಂಡ್‌ ಕಂಪೆನಿಯ ಜತೆ ಮಾಡಿಕೊಂಡ ಒಪ್ಪಂದ ಮುರಿದುಬಿದ್ದಿರುವ ಹಿನ್ನೆಲೆ­ಯಲ್ಲಿ ಆ ದೇಶದ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಇಡಲಾಗಿರುವ ರೂ. 2,134 ಕೋಟಿಯನ್ನು ಪುನಃ ವಶಕ್ಕೆ ತೆಗೆದುಕೊಳ್ಳಲು ಕ್ರಮ ತೆಗೆದುಕೊಳ್ಳ­ಲಾಗುವುದು ಎಂದು ಭಾರತ ತಿಳಿಸಿದೆ.ಒಪ್ಪಂದದ ಅನ್ವಯ ಇಟಲಿಯ ಡಚ್‌ ಬ್ಯಾಂಕ್‌ನಲ್ಲಿ ಈ ಕಂಪೆನಿ ರೂ. 2,134 ಕೋಟಿ ಮೊತ್ತವನ್ನು ಠೇವಣಿಯಾಗಿ ಇರಿಸಿದೆ ಎಂದು ಈ ಸಂಬಂಧ ಮಾಹಿತಿ ಹಕ್ಕು ಅಡಿ ಸುಭಾಷ್‌ ಅಗರವಾಲ್‌ ಎಂಬು­ವವರು ಕೇಳಿದ ಪ್ರಶ್ನೆಗೆ ಭಾರತೀಯ ವಾಯುಪಡೆ ಉತ್ತರ ನೀಡಿದೆ.ಠೇವಣಿ ಮೊತ್ತ ವಾಪಸ್‌ ಪಡೆಯಲು ಇಟಲಿಯ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಆ ಹಣವನ್ನು ವಶಕ್ಕೆ ತೆಗೆದುಕೊಳ್ಳಲು ಭಾರತ ಮುಂದಾಗಿದೆ. ಹೆಲಿಕಾಪ್ಟರ್‌ ಖರೀದಿಗೆ  ಸಂಬಂಧಿಸಿದಂತೆ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಹಾಗೂ ಇತರರ ವಿರುದ್ಧ ಲಂಚದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ  ಒಪ್ಪಂದ ರದ್ದುಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.