ಹೆಲಿಕಾಪ್ಟರ್ ಅಪಘಾತ: ಜಾರ್ಖಂಡ್ ಮುಖ್ಯಮಂತ್ರಿಗೆ ಗಾಯ

7

ಹೆಲಿಕಾಪ್ಟರ್ ಅಪಘಾತ: ಜಾರ್ಖಂಡ್ ಮುಖ್ಯಮಂತ್ರಿಗೆ ಗಾಯ

Published:
Updated:
ಹೆಲಿಕಾಪ್ಟರ್ ಅಪಘಾತ: ಜಾರ್ಖಂಡ್ ಮುಖ್ಯಮಂತ್ರಿಗೆ ಗಾಯ

ರಾಂಚಿ (ಪಿಟಿಐ): ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಇಲ್ಲಿನ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಅಪಘಾತಕ್ಕಿಡಾದ ಘಟನೆ ಬುಧವಾರ ನಡೆದಿದ್ದು,  ಇಬ್ಬರೂ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.~ಮುಂಡಾ ಹಾಗೂ ಅವರ ಪತ್ನಿ ಮೀರಾ ಅವರು ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಸರೈಕೆಲ ಖರಸ್ವಾ ಜಿಲ್ಲೆಗೆ ಪವನ್ ಹನ್ಸ್ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದರು. ಇಲ್ಲಿನ ಕುಚೈ ಎಂಬಲ್ಲಿ ಹೆಲಿಕಾಪ್ಟರ್ ಇಳಿಯಬೇಕಿತ್ತು. ಆದರೆ ಇಳಿಯಲು ಸಾಧ್ಯವಾಗದ ಕಾರಣ ಹೆಲಿಕಾಪ್ಟರ್ 100 ಕಿ.ಮೀ ದೂರದಲ್ಲಿರುವ ಬಿರ್ಸಾ ಮುಂಡಾ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿತು. ಆದರೆ ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ತುಸು ಎತ್ತರದಿಂದ ನೆಲಕ್ಕೆ ಒಮ್ಮೆಲೆ ಕುಸಿದು ಬಿತ್ತು~ ಎಂದು ಮುಖ್ಯಮಂತ್ರಿಯ ಆಪ್ತರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಮುಂಡಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಬಲಗೈ ಮುರಿದಿದೆ. ಎದೆ ಹಾಗೂ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಹಾಗೆಯೇ ಮುಂಡಾ ಅವರ ಪತ್ನಿಗೂ ಕೂಡ ಸಣ್ಣ ಪುಟ್ಟ ಪೆಟ್ಟಾಗಿದ್ದು ದಂಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry