ಹೆಲಿಕಾಪ್ಟರ್ ಅಪಘಾತ: ಮೂವರು ನೌಕಾಪಡೆ ಅಧಿಕಾರಿಗಳ ದುರ್ಮರಣ

7

ಹೆಲಿಕಾಪ್ಟರ್ ಅಪಘಾತ: ಮೂವರು ನೌಕಾಪಡೆ ಅಧಿಕಾರಿಗಳ ದುರ್ಮರಣ

Published:
Updated:
ಹೆಲಿಕಾಪ್ಟರ್ ಅಪಘಾತ: ಮೂವರು ನೌಕಾಪಡೆ ಅಧಿಕಾರಿಗಳ ದುರ್ಮರಣ

ಪಣಜಿ /ನವದೆಹಲಿ (ಐಎಎನ್‌ಎಸ್): ಗೋವಾದ ದಾಬೋಲಿಂ ನೌಕಾಪಡೆಯ ವಾಯುನೆಲೆಯ ರನ್‌ವೇಯಲ್ಲಿ ಚೇತಕ್ ಹೆಲಿಕಾಪ್ಟರ್ ಇಳಿಯುವಾಗ ಸಂಭವಿಸಿದ ಅಪಘಾತದಲ್ಲಿ ಮೂವರು ನೌಕಾಪಡೆ ಅಧಿಕಾರಿಗಳು ಮೃತರಾದ ಘಟನೆ ಸೋಮವಾರ ನಡೆದಿದೆ.ಅಪಘಾತಕ್ಕಿಡಾದ ಹೆಲಿಕಾಪ್ಟರ್ ಮುಂಬೈನಿಂದ ಬೆಂಗಳೂರಿನ ಕಡೆಗೆ ಬರುತ್ತಿತ್ತು. ಇಲ್ಲಿನ ಐಎನ್ ಎಸ್ ವಾಯುನೆಲೆಯಲ್ಲಿ ಇಂಧನ ಮರುಭರ್ತಿಗಾಗಿ ಇಳಿಯುವಾಗ ಹೆಲಿಕಾಪ್ಟರ್‌ ನ ರೋಟರ್ ತುಂಡಾಗಿ ಬೆಂಕಿ ಹೊತ್ತಿಕೊಂಡು ವಿಮಾನ ನೆಲಕ್ಕೆ ಅಪ್ಪಳಿಸಿತು ಎಂದು ನೌಕಾ ಪಡೆಯ ವಕ್ತಾರರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಅಧಿಕಾರಿಗಳು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ವಕ್ತಾರರು ದೃಢಪಡಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry