ಹೆಲಿಕಾಪ್ಟರ್ ಖರೀದಿ ವ್ಯವಹಾರಹೆಲಿಕಾಪ್ಟರ್ ಖರೀದಿ ವ್ಯವಹಾರ.ಹೆಸರು ಬಹಿರಂಗ ಪಡಿಸಲು ಸೂಚನೆ

7

ಹೆಲಿಕಾಪ್ಟರ್ ಖರೀದಿ ವ್ಯವಹಾರಹೆಲಿಕಾಪ್ಟರ್ ಖರೀದಿ ವ್ಯವಹಾರ.ಹೆಸರು ಬಹಿರಂಗ ಪಡಿಸಲು ಸೂಚನೆ

Published:
Updated:

ನವದೆಹಲಿ (ಪಿಟಿಐ): ‘ಬಳಕೆಯಲ್ಲಿ ಇಲ್ಲದ’ ಆರು ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ ಪಡೆಯಲು ಒಪ್ಪಿಗೆ ನೀಡಿದ್ದ ಸಚಿವರು ಮತ್ತು ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದೆ.ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬಹಿರಂಗ ಪಡಿಸಲು ಭಾರತೀಯ ನೌಕಾಪಡೆ ಈ ಹಿಂದೆ ನಿರಾಕರಿಸಿತ್ತು. ಮಾಹಿತಿ ಬಹಿರಂಗ ಪಡಿಸಿದರೆ ಅದು ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆ ಎಂದು ಹೇಳಿ ಮಾಹಿತಿ ತಡೆಗೆ ಆರ್‌ಟಿಐ ಕಾಯಿದೆಯ ಸೆಕ್ಷನ್ 8 (1) (ಎ) ಅಡಿ ವಿನಾಯ್ತಿ ಇರುವುದನ್ನು ಉದಾಹರಿಸಿತ್ತು.ಸಿಎಜಿಯವರಿಂದ ಬಂದ ಟೀಕೆ, ನೌಕಾಪಡೆ ನೀಡಿದ ಪ್ರತಿಕ್ರಿಯೆಗಳು, ಈ ವ್ಯವಹಾರಕ್ಕೆ ಒಪ್ಪಿಗೆ ಸೂಚಿಸಿದ ಸಚಿವರು, ರಕ್ಷಣಾ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳ ಹೆಸರು ಸೇರಿದಂತೆ ಒಪ್ಪಂದದ ಬಗ್ಗೆ ನೌಕಾಪಡೆ ಮಾಹಿತಿ ನೀಡಬೇಕು ಎಂದು  ಅರ್ಜಿದಾರ ಸುಭಾಷ್  ಅಗರ್‌ವಾಲ್ ಕೋರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry