ಹೆಲೆಟ್ ಕಡ್ಡಾಯವಾಗಿ ಧರಿಸಲು ಮನವಿ

ಹಿರೇಕೆರೂರ: ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಬೈಕ್ ಸವಾರರಿಗೆ ಪಟ್ಟಣದಲ್ಲಿ ಶುಕ್ರವಾರ ಪೊಲೀಸರು ಹೂವು ನೀಡುವ ಮೂಲಕ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಮುಖ ಬೀದಿಯಲ್ಲಿ ಪೊಲೀಸರಿಂದ ಹೆಲ್ಮೆಟ್ ಜಾಗೃತಿ ಕುರಿತು ಬೈಕ್ ರ್ಯಾಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಮಹಾಂತೇಶ ಎಂ.ಎಂ., ‘ಬೈಕ್ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಅವರು ಹೇಳಿದರು.
ಫೆಬ್ರುವರಿ 1ರಿಂದ ಕಡ್ಡಾಯವಾಗಿ ಪಾಲಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೊದಲ ಬಾರಿ ಹೆಲ್ಮೆಟ್ ಇಲ್ಲದ ಸವಾರರಿಗೆ ₹ 100, 2ನೇ ಬಾರಿಗೆ ₹ 200 ದಂಡ ವಸೂಲಿ ಮಾಡಲಾಗುವುದು. 3ನೇ ಬಾರಿ ಹೆಲ್ಮೆಟ್ ಧರಿಸದೇ ಉಲ್ಲಂಘನೆ ಮಾಡಿದರೆ ಸವಾರರ ಪರವಾನಗಿ ರದ್ದು ಮಾಡಲು ಸಾರಿಗೆ ಅಧಿಕಾರಿ (ಆರ್ಟಿಓ)ಗೆ ಪತ್ರ ಬರೆಯಲಾಗುವುದು’ ಎಂದು ತಿಳಿಸಿದರು.
ಬೈಕ್ ಸವಾರರಿಗೆ ಹೂವುಗಳನ್ನು ನೀಡಿ, ಜಾಗೃತಿ ಮೂಡಿಸಲಾಯಿತು. ರಟ್ಟೀಹಳ್ಳಿ ಸಬ್ ಇನ್ಸ್ಪೆಕ್ಟರ್ ದೇವಾನಂದ ಹಾಗೂ ಸ್ಥಳೀಯ ಠಾಣೆಯ ಎಲ್ಲ ಸಿಬ್ಬಂದಿ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.