ಹೆಲ್ತೆಕ್ಸ್ ಆರೋಗ್ಯ ದರ್ಶನ

7

ಹೆಲ್ತೆಕ್ಸ್ ಆರೋಗ್ಯ ದರ್ಶನ

Published:
Updated:
ಹೆಲ್ತೆಕ್ಸ್ ಆರೋಗ್ಯ ದರ್ಶನ

ವೈದ್ಯಕೀಯ, ಶಸ್ತ್ರಕ್ರಿಯೆ ಮತ್ತು ರೋಗಪತ್ತೆ ಉಪಕರಣಗಳು, ತಂತ್ರಜ್ಞಾನ ಹೀಗೆ ಆರೋಗ್ಯಕ್ಕೆ ಸಂಬಂಧಿಸಿದ ಸಾಧನಗಳು, ಸಮಗ್ರ ಮಾಹಿತಿಯ ಮೇಳ `ಹೆಲ್ತೆಕ್ಸ್ 2011~ ಶುಕ್ರವಾರ ಆರಂಭವಾಗಿದ್ದು, ಭಾನುವಾರದ ವರೆಗೆ ನಡೆಯಲಿದೆ.ರಾಜ್ಯ ಆರೋಗ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಕಮಾಂಡ್ ಆಸ್ಪತ್ರೆ ಪ್ರಧಾನ ವೈದ್ಯಕೀಯ ಅಧಿಕಾರಿ ಏರ್‌ವೈಸ್ ಮಾರ್ಷಲ್ ಪಂಕಜ್ ತ್ಯಾಗಿ, ಅಪೋಲೊ ಆಸ್ಪತ್ರೆ ಸಂಸ್ಥಾಪಕ ಡಾ. ಪ್ರತಾಪ್ ಸಿ. ರೆಡ್ಡಿ ಮೇಳಕ್ಕೆ ಚಾಲನೆ ನೀಡಿದರು.ವಿಶ್ವಾಸಾರ್ಹ, ಸುಸ್ಥಿರ ವೈದ್ಯಕೀಯ ಉಪಕರಣಗಳು, ತಂತ್ರಜ್ಞಾನಗಳನ್ನು ಒಂದೇ ಸೂರಿನಡಿ ಇಲ್ಲಿ ಪ್ರದರ್ಶಿಸಲಾಗಿದೆ. ಜತೆಗೆ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳು, ಹೊಸ ಹೊಸ ಸಂಶೋಧನೆಗಳ ಮೇಲೂ ಇದು ಬೆಳಕು ಚೆಲ್ಲುತ್ತಿದೆ. ಇದಲ್ಲದೆ ವೈದ್ಯರಿಗೆ ಉಪಯುಕ್ತವಾದ ಅನೇಕ ವಿಚಾರಗೋಷ್ಠಿಗಳೂ ಇಲ್ಲಿ ನಡೆಯುತ್ತಿವೆ.ಸುಮಾರು 60 ಸಂಸ್ಥೆಗಳು ಉನ್ನತ ಮತ್ತು ಕಡಿಮೆ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಇಲ್ಲಿ ಪ್ರದರ್ಶಿಸುತ್ತಿವೆ. ಶಸ್ತ್ರಕ್ರಿಯಾ ಉಪಕರಣಗಳು ಮತ್ತು ದೇಹದಲ್ಲಿ ಅಳವಡಿಸಬಹುದಾದ ಸಾಧನಗಳು, ಫಿಜಿಯೋಥರಪಿ ಉತ್ಪನ್ನಗಳು, ಸಂಪರ್ಕ ವ್ಯವಸ್ಥೆಗಳು ಇಲ್ಲಿವೆ. ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಉಪಯುಕ್ತವಾಗಿದೆ.

ಸ್ಥಳ: ಬೆಂಗಳೂರು ಅಂತರ‌್ರಾಷ್ಟ್ರೀಯ ಪ್ರದರ್ಶನ ಕೇಂದ್ರ, ತುಮಕೂರು ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry