ಶುಕ್ರವಾರ, ಏಪ್ರಿಲ್ 16, 2021
30 °C

ಹೆಲ್ತ್ ಅವಾರ್ಡ್-2012 ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಲ್ತ್ ಅವಾರ್ಡ್-2012 ಪ್ರದಾನ

ಬೆಂಗಳೂರು: ಕಾಯಿಲೆಗಳು ಹಾಗೂ ಅಂಗವಿಕಲತೆ ವಿರುದ್ಧ ಹೋರಾಡಿ ವಿಶೇಷ ಧೈರ್ಯ ಸಾಹಸಗಳನ್ನು ಪ್ರದರ್ಶಿಸಿರುವ ಸಾಧಕರಿಗೆ `ಬಜಾಜ್ ಡಿಸ್ಕವರ್~ ಆಶ್ರಯದಲ್ಲಿ `ಡಾ.ಬಾತ್ರಾಸ್ ಪಾಸಿಟೀವ್ ಹೆಲ್ತ್ ಅವಾರ್ಡ್- 2012~ ಪ್ರದಾನ ಸಮಾರಂಭ ನಗರದಲ್ಲಿ ಇತ್ತೀಚೆಗೆ ನಡೆಯಿತು.ಗಾಲಿಕುರ್ಚಿ ಟೆನಿಸ್ ಚಾಂಪಿಯನ್ ಬೋನಿಫೇಸ್ ಪ್ರಭು, ಮ್ಯಾನೇಜ್‌ಮೆಂಟ್ ಗುರು ಡಾ. ರಾಜ್‌ದೀಪ್ ಮನ್ವಾನಿ, ಮೆದುಳಿನ ಬುದ್ಧಿಮಾಂದ್ಯತೆ ನಡುವೆಯೂ ಬಿಇ ಪದವಿ ಪಡೆದ ಅಶ್ವಿನ್ ಕಾರ್ತಿಕ್, ಭರತನಾಟ್ಯ ಕಲಾವಿದೆ ಟಿ.ಜೆ. ನಿವೇದಿತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರನಟಿ ಸಂಜನಾ ಪ್ರಶಸ್ತಿ ಪ್ರದಾನ ಮಾಡಿದರು.ಬಜಾಜ್ ಆಟೊದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಮಾತನಾಡಿ, `ಪ್ರಶಸ್ತಿ ಪುರಸ್ಕೃತರ ಕಥೆ ನಿಸ್ಸಂದೇಹವಾಗಿ ಇತರರಿಗೆ ಪ್ರೇರಣೆ ನೀಡಲಿದೆ ಹಾಗೂ ದೇಶದ ಜನರಲ್ಲಿ ಆಶಾಕಿರಣ ಮೂಡಿಸಲಿದೆ~ ಎಂದರು.ಸಂಸದೆ ಮೇನಕಾ ಗಾಂಧಿ, ಹಿಂದಿ ಚಿತ್ರನಟ ವಿವೇಕ್ ಒಬೆರಾಯ್, ಚಿತ್ರನಿರ್ಮಾಪಕ ಆರ್. ಬಾಲ್ಕಿ, ಬಜಾಜ್ ಆಟೊ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್, ಡಾ. ಬಾತ್ರಾಸ್ ಪಾಸಿಟೀವ್ ಹೆಲ್ತ್ ಕ್ಲಿನಿಕ್‌ನ ಸಂಸ್ಥಾಪಕ ಡಾ. ಮುಕೇಶ್ ಬಾತ್ರಾ ಅವರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿತ್ತು. ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರ ಕುರಿತ ಕಿರುಚಿತ್ರವೊಂದನ್ನು ಪ್ರದರ್ಶಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.