ಹೆವಿಟ್‌ ಮುಡಿಗೆ ಪ್ರಶಸ್ತಿ

7
ಟೆನಿಸ್‌: ಫೆಡರರ್‌ಗೆ ನಿರಾಸೆ

ಹೆವಿಟ್‌ ಮುಡಿಗೆ ಪ್ರಶಸ್ತಿ

Published:
Updated:
ಹೆವಿಟ್‌ ಮುಡಿಗೆ ಪ್ರಶಸ್ತಿ

ಬ್ರಿಸ್ಬೇನ್ (ಎಎಫ್‌ಪಿ): ಆಸ್ಟ್ರೇಲಿಯಾದ ಲೇಟನ್ ಹೆವಿಟ್‌  ಇಲ್ಲಿ ಮುಕ್ತಾಯಗೊಂಡ ಬ್ರಿಸ್ಬೇನ್ ಇಂಟರ್‌ ನ್ಯಾಷನಲ್ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.ಭಾನುವಾರ ನಡೆದ ಫೈನಲ್‌ನಲ್ಲಿ ಹೆವಿಟ್ 6–1, 4–6, 6–3 ಸೆಟ್‌ನಿಂದ  ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರನ್ನು ಮಣಿಸಿದರು.

ಒಟ್ಟು ಎರಡು ಗಂಟೆ ಏಳು ನಿಮಿಷಗಳಿಂದ ಕೂಡಿದ್ದ ಕಠಿಣ ಪೈಪೋಟಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ಫೆಡರರ್‌ ನಿರಾಸೆ ಅನುಭವಿಸಿದರು.

ಮೊದಲ ಸೆಟ್‌ನಲ್ಲಿ ಕಳಪೆ  ಪ್ರದರ್ಶನ ತೋರಿದ ಫೆಡರರ್‌ 22 ಬಾರಿ ಅನಗತ್ಯ ತಪ್ಪೆಸಗಿದರು. ಇದರ ಪೂರ್ಣ ಲಾಭ ಪಡೆದ ಹೆವಿಟ್ ಸೆಟ್‌ ಅನ್ನು ಸುಲಭವಾಗಿ ಗೆದ್ದುಕೊಂಡರು.ಎರಡನೇ ಸೆಟ್‌ನ ಆರಂಭದಲ್ಲಿ ಮತ್ತೆ ವೈಫಲ್ಯ ಅನುಭವಿಸಿದ ಫೆಡರರ್‌ ಸುಲಭವಾಗಿ ಹೆವಿಟ್‌ಗೆ ಪಾಯಿಂಟ್‌ ಬಿಟ್ಟುಕೊಟ್ಟರು. ಆ ಬಳಿಕ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದ ಅವರು ಕಠಿಣ ಹೋರಾಟ ನಡೆಸಿ ಎದುರಾಳಿಯ ಮೇಲೆ ಒತ್ತಡ ಹೇರುವ ಮೂಲಕ ಸೆಟ್‌ನಲ್ಲಿ ಗೆಲುವು ಪಡೆದು ಪಂದ್ಯದಲ್ಲಿ ಸಮಬಲ ಸಾಧಿಸಿದರು.ತೀವ್ರ ಕುತೂಹಲ ಕೆರಳಿಸಿದ್ದ ನಿರ್ಣಾಯಕ ಸೆಟ್‌ನ ಆರಂಭದಲ್ಲಿ ಹೆವಿಟ್‌ ಸರ್ವ್‌ ಮೇಲೆ ಹಿಡಿತ ಸಾಧಿಸಲು ಪ್ರಯಾಸಪಟ್ಟರು. ಆದರೆ ಫೆಡರರ್‌ ಅನಿರೀಕ್ಷಿತವಾಗಿ ಸರ್ವ್‌ ಕಳೆದುಕೊಂಡಿದ್ದರಿಂದ ಹೆವಿಟ್ 4–1ರಲ್ಲಿ ಮುನ್ನಡೆ ಗಳಿಸಿದರು.ನಂತರ ಫೆಡರರ್ ಎರಡು ಗೇಮ್‌ ಗೆದ್ದುಕೊಂಡರೂ, ಅಂತಿಮವಾಗಿ ಹೆವಿಟ್ ಜಯ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾದ ಆಟಗಾರನಿಗೆ ದೊರೆತ 29ನೇ ಎಟಿಪಿ ಪ್ರಶಸ್ತಿ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry