ಶುಕ್ರವಾರ, ಮೇ 7, 2021
20 °C

ಹೆಸರಿಗೆ ಉದ್ಯಾನ: ಒಳಗೆ ಅಧ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನಗರದ ಹೌಸಿಂಗ್ ಬೋರ್ಡ್‌ನಲ್ಲಿ ನಿರ್ಮಾಣಗೊಂಡ ಉದ್ಯಾನವನ ನಿರ್ವಹಣೆ ಇಲ್ಲದೆ ಸೊರಗಿದೆ. ಉದ್ಯಾನ ಆಟದ ಮೈದಾನವಾಗಿ ಬದಲಾಗಿದೆ. ಬೆಳೆಸಿರುವ ಗಿಡಗಳು ಒಣಗುತ್ತಿವೆ. ವಾಕಿಂಗ್ ಟ್ರ್ಯಾಕ್‌ನ ಇಟ್ಟಿಗೆಗಳು ಹೊರಬಂದಿವೆ. ನೀರಿನ ಹೊಂಡಕ್ಕೆ ಯಾವುದೇ ರಕ್ಷಣೆ ಇಲ್ಲ. ಎರಡು ಸೌರವಿದ್ಯುತ್ ದೀಪ ಮಾತ್ರವಿದೆ ಆದರೆ, ಸೌರವಿದ್ಯುತ್ ದೀಪದ ಬ್ಯಾಟರಿ ಕಳುವಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಉದ್ಯಾನದಲ್ಲಿ ಕಾವಲುಗಾರ ಇಲ್ಲದಿರುವುದೇ ಕಾರಣ ಎನ್ನುವುದು ನಾಗರಿಕರ ದೂರು.ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆಯಿಂದ ಬಡಾವಣೆಗಳಲ್ಲಿ ಉತ್ತಮ ಉದ್ಯಾನಗಳು ನಿರ್ಮಾಣ ಗೊಳ್ಳುತ್ತಿವೆ ಆದರೆ, ನಿರ್ವಹಣೆ ಇಲ್ಲದೆ ಉದ್ಯಾನಗಳು ಹಾಳಾಗು ತ್ತಿವೆ. ಸುಮಾರು 10 ದಿನಗಳಿಂದ ಹೌಸಿಂಗ್ ಬೋರ್ಡ್‌ನಲ್ಲಿರುವ ಉದ್ಯಾನದ ಗಿಡಗಳಿಗೆ ನೀರು ಹಾಕಿಲ್ಲ. ಮಕ್ಕಳು ಉದ್ಯಾನದಲ್ಲೆ ಕ್ರಿಕೆಟ್ ಆಡುತ್ತಿದ್ದಾರೆ. ಆಟದ ಉತ್ಸಾಹದಲ್ಲಿ ವಾಕಿಂಗ್ ಟ್ರ್ಯಾಕ್‌ಗೆ ಅಳವಡಿಸಿರುವ ಇಟ್ಟಿಗಳನ್ನು ಕಿತ್ತೊಗೆಯುತ್ತಿದ್ದಾರೆ. ಉದ್ಯಾನದಲ್ಲಿ ಕ್ರಿಕೆಟ್ ಆಡುವುದನ್ನು ನಿಷೇಧಿಸ ಬೇಕು ಎಂದು ಹಲವು ಬಾರಿ ಜಿಲ್ಲಾಡಳಿತ, ನಗರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಉದ್ಯಾನದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ಹುಳುಗಳಿಗೆ ವಾಸಸ್ಥಾನವಾಗಿದೆ. ನಿರ್ಮಾಣ ಮಾಡಿರುವ ನೀರಿನ ಹೊಂಡಕ್ಕೆ ಯಾವುದೇ ತಡೆಗೋಡೆ ಇಲ್ಲ. ಇದರಿಂದ ಪುಟ್ಟ ಮಕ್ಕಳು ಆಟವಾಡುವಾಗ ಹೊಂಡಕ್ಕೆ ಬಿದ್ದು ದುರಂತವಾಗಬಹುದು ಎನ್ನುವುದು ಪೋಷಕರ ಆತಂಕ.

ನಿರ್ವಹಣೆ ಮತ್ತು ಸುರಕ್ಷತೆಗಾಗಿ ಮಾಲಿ, ಕಾವಲುಗಾರನ ಅಗತ್ಯವಿದೆ. ಕೂಡಲೇ, ಉದ್ಯಾನ ನಿರ್ವಹಣೆಗೆ ಜಿಲ್ಲಾಡಳಿತ ಹಾಗೂ ನಗರಸಭೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಕ್ಯಾಪ್ಟನ್ ಸಿ. ವೀರಯ್ಯ, ರಾಜು, ಮಹದೇವಪ್ಪ, ಕಾರಂತ್ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.