ಹೆಸರು ಬದಲಿಸುವರೆ ಏಂಜಲಿನಾ?

7

ಹೆಸರು ಬದಲಿಸುವರೆ ಏಂಜಲಿನಾ?

Published:
Updated:
ಹೆಸರು ಬದಲಿಸುವರೆ ಏಂಜಲಿನಾ?

ಹಾಲಿವುಡ್‌ನಲ್ಲಿ ಬ್ರಾಡಲಿನಾ ಜೋಡಿ, ಬಾಲಿವುಡ್‌ನಲ್ಲಿ ಸೈಫೀನಾ ಜೋಡಿ, ಮದುವೆಯಾಗುವುದು ಯಾವಾಗ ಎಂಬ ಚರ್ಚೆ ಬಿಸಿಯಾಗಿರುವಾಗಲೇ ಏಂಜಲಿನಾ ತಮ್ಮ ಅಡ್ಡ ಹೆಸರನ್ನು ಬದಲಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಲಂಡನ್ ಮೂಲದಿಂದ ಈ ಸುದ್ದಿ ಬಂದಿದ್ದು, ಏಂಜಲಿನಾ ತಮ್ಮ ಹೆಸರಿನೊಂದಿಗೆ ಪಿಟ್ ಹೆಸರು ಸೇರಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ.ಸುದ್ದಿಯ ಜಾಡನ್ನು ಬೆಂಬತ್ತಿದವರು `ಈಗಾಗಲೇ ಈ ಜೋಡಿ ಮದುವೆಯಾಗಿದೆ. ತಾವು ದತ್ತು ತೆಗೆದುಕೊಂಡ ಮಕ್ಕಳೊಂದಿಗೆ ಫ್ರಾನ್ಸ್‌ನಲ್ಲಿ ಕುಟುಂಬದವರು ಹಾಗೂ ಆಪ್ತೇಷ್ಟರಿಗೆ ಮಾತ್ರ ಮದುವೆಯ ಔತಣ ಕೂಟ ಏರ್ಪಡಿಸಲಾಗಿದೆ~ ಎಂದೆಲ್ಲ ವರದಿ ಮಾಡಿದ್ದಾರೆ.ಬ್ರಾಡ್ ಪಿಟ್ ಮತ್ತು ಏಂಜಲಿನಾ ಜೂಲಿ ಈಗಾಗಲೇ ಅಮೆರಿಕದಲ್ಲಿ ಮದುವೆಯಾಗಿದ್ದು, ದಿನಾಂಕವನ್ನು ಗೋಪ್ಯವಾಗಿಡುತ್ತಿದ್ದಾರೆ ಎಂದು ಒಂದು ಮೂಲ ಹೇಳುತ್ತಿದೆ. ಇನ್ನೊಂದೆಡೆ ಅವರ ಮನೆಗೆ ಮೇಜು ಕುರ್ಚಿಗಳು ಬಂದಿಳಿಯುತ್ತಿವೆ.

 

ಮದುವೆಯ ತಯಾರಿ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಈ ಜೋಡಿ ದಿನಾಂಕವನ್ನೂ ಘೋಷಿಸಬಹುದು. ಅದಕ್ಕೆ ಪೂರ್ವಿಭಾವಿಯಾಗಿ ಹೆಸರನ್ನು ಜೂಲಿ ಪಿಟ್ ಎಂದು ಬದಲಾಗಿದೆಯಷ್ಟೆ ಎಂಬ ಸುದ್ದಿಯೂ ಹರಡಿದೆ.ಈ ಎರಡು ಸುದ್ದಿಗಳಲ್ಲಿ ಯಾವುದು ನಿಜ ಎಂದು ಬ್ರಾಡಲಿನಾ ಮಾತ್ರ ಹೇಳಬೇಕು. ಆದರೆ ಅವರಿಬ್ಬರೂ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry