ಶುಕ್ರವಾರ, ಜೂನ್ 18, 2021
24 °C

ಹೆಸರು ಸೇರ್ಪಡೆ ಅಭಿಯಾನ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಜ್ಯ ಚುನಾವಣೆ ಆಯೋಗ ಹೊರಡಿಸಿದ ಮತದಾರರ ನೋಂದಣಿ ಅಭಿಯಾನದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಾಲ್ಕು ಗಂಟೆ­ಯವರೆಗೆ ಹೊಸ ಮತದಾರರ ಹೆಸರು ಸೇರ್ಪಡೆಗೆ ಅರ್ಜಿಗಳನ್ನು ತಹಶೀಲ್ದಾರ ಕಚೇರಿ  ಸಿಬ್ಬಂದಿ ಸ್ವೀಕರಿಸಿದರು.ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತ­ದಾರರ ನೋಂದಣಿಗೆ ಸಲ್ಲಿಸಿದ ಅರ್ಜಿ ವಿವರ ಇಂತಿದೆ. ರಾಯಚೂರು ಗ್ರಾಮೀಣ– 5,311,  ರಾಯಚೂರು ನಗರ– 6,304, ಮಾನ್ವಿ– 7,446, ದೇವದುರ್ಗ–1,734, ಲಿಂಗಸುಗೂರು– 1005 ಅರ್ಜಿ ಸಲ್ಲಿಕೆಯಾಗಿವೆ.ಭಾನುವಾರ ಸಂಜೆ ನಾಲ್ಕು ಗಂಟೆಯವರೆಗೆ ರಾಯಚೂರು ನಗರ ಹಾಗೂ ಗ್ರಾಮೀಣ ಸೇರಿದಂತೆ ಹೆಚ್ಚು­ವರಿ­ಯಾಗಿ ಸುಮಾರು 1,600 ಅರ್ಜಿಗಳ ಸಲ್ಲಿಕೆಯಾಗಿವೆ. ಇನ್ನುಳಿದಂತೆ ಲೋಕಸಭಾ ಚುನಾವಣೆಯ ಹಿನ್ನೆಲೆ­ಯಲ್ಲಿ ನೂತನ ಮತದಾರರ ಹೆಸರು ಸೇರ್ಪಡೆಗಾಗಿ ನಿಯೋಜಿಸಿದ ಮತದಾ­ರರ ನೋಂದಣಿ ಅಧಿಕಾರಿ­(ಬಿಎಲ್ಒ)­ಗಳ ಮೂಲಕ ನೂತನ ಮತದಾರರ ಹೆಸರು ಸೇರ್ಪಡೆಗೆ ಸಲ್ಲಿಸಿದ ಅರ್ಜಿಗಳ ಬರುತ್ತಿವೆ.ಹೆಚ್ಚುವರಿಯಾದ ಮತದಾರರ ಸಂಖ್ಯೆ ಹಾಗೂ ಸರಿಯಾದ ದಾಖಲೆ ಸಲ್ಲಿಸಿದ, ತಿರಸ್ಕೃತಗೊಂಡ ಅರ್ಜಿಗಳ ಸಂಪೂರ್ಣವಾಗಿ ಮಾಹಿತಿ ಸೋಮವಾರದವರೆಗೆ ತಿಳಿದು ಬರುತ್ತದೆ ಎಂದು ತಹಶೀಲ್ದಾರ ಕಚೇರಿ ಶಿರಸ್ತೇದಾರ ಅನ್ವರ್ ತಿಳಿಸಿದರು.ರಾಯಚೂರು ನಗರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನೂತನ ಹೆಸರು ಸೇರ್ಪಡೆಗಾಗಿ ಅರ್ಜಿಗಳು ಹಾಗೂ ಹೆಸರು ತಿದ್ದುಪಡಿ, ಮತದಾರರ ಗುರುತಿನ ಚೀಟಿಯಲ್ಲಿನ ತಿದ್ದುಪಡಿಗೆ ಸಂಬಂಧಿಸಿದಂತೆ ಸಾರ್ವ­ಜನಿಕರು ಭಾನುವಾರ ಸಂಜೆವರೆಗೆ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬಂದಿತು. ಸಮರ್ಪಕ ಮಾಹಿತಿ ತಿಳಿಯದ ನೂತನ ಮತದಾರರು ಹೆಸರು ಸೇರ್ಪಡೆ­ಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಪರಾದಾಡುತ್ತಿರುವುದು ಕಂಡಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.