ಭಾನುವಾರ, ಮೇ 22, 2022
21 °C

ಹೇಗೆ ಅರ್ಜಿ ಸಲ್ಲಿಸುವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರು ಬೆಂಗಳೂರು ಐಟಿ ಸಿಟಿಯಾಗಿರುವ ಕಾರಣ ಕರ್ನಾಟಕವು ಐಟಿ ರಾಜ್ಯ ಎಂಬ ನಿಲುವಿಗೆ ಬಂದಿದ್ದಾರೆ ಅನಿಸುತ್ತದೆ. ಅದಕ್ಕಾಗಿ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ನಿಯಮ ತಂದಿದ್ದಾರೆ.ಕಂಪ್ಯೂಟರ್ ಜ್ಞಾನವಿರುವ ನಾನು ಕಳೆದ ಎರಡು ದಿನಗಳಿಂದ ಹರ ಸಾಹಸ ಪಟ್ಟರೂ ಅರ್ಜಿ ಸಲ್ಲಿಸಲಾಗಿಲ್ಲ. ಕಾರಣ ಫೋಟೋ ಸ್ಕ್ಯಾನ್ ಮಾಡಿಕೊಂಡಿದ್ದೇನೆ. ಆದರೆ, ಅದು ಯಾವ ರೂಪದಲ್ಲಿರಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಈಗ ಮೂರು ರೂಪದಲ್ಲಿರಿಸಿ ಅರ್ಜಿಗೆ ಸೇರಿಸಲು ಪ್ರಯತ್ನಿಸಿದೆ, ಆದರೂ ಫಲಿಸಲಿಲ್ಲ (ಜೆಪಿಇಜಿ, ಟಿಐಎಫ್‌ಎಫ್, ಜಿಐಎಫ್). ಅವರೇ ತಿಳಿಸಿರುವ ಗಾತ್ರ, ಅಳತೆಯಲ್ಲಿ ಸಿದ್ಧಪಡಿಸಿದ್ದೇನೆ. ಆದರೂ ಅದು ಸಾಧ್ಯವಾಗಿಲ್ಲ.ಒಮ್ಮೆ ಫೋಟೋ ಸರಿಯಾಗಿದ್ದರೂ ಕಡೆಯ ಹಂತದಲ್ಲಿ ನೀಡುವ ಪಿನ್ ನಂ. ಸರಿಯಿಲ್ಲ ಎಂಬುದಾಗಿ ಹೇಳುತ್ತದೆ. ಅಲ್ಲೇ ನಮೂದಿಸಿರುವ ಪಿನ್ ನಂ. ಅನ್ನು ಯಥಾವತ್ತಾಗಿ ನಮೂದಿಸಿದರೂ ಅದು ಸರಿಯಿಲ್ಲ ಎಂದರೆ ಏನು ಮಾಡುವುದು? ಮತ್ತೊಂದು ವಿಪರ್ಯಾಸ, ಕೆಪಿಎಸ್‌ಸಿ ವೆಬ್‌ಸೈಟ್ ನಲ್ಲಿ ನೀಡಿರುವ ಫೋನ್ ನಂ. ಗಳು ಸದಾ ಕಾಲ ಕಾರ್ಯನಿರತವಾಗಿರುತ್ತವೆ ಎಂದರೆ ನಂಬಲಸಾಧ್ಯ, ಅದರಲ್ಲಿ 4 ನಂಬರುಗಳಿವೆ.ಎರಡು ಮೊಬೈಲ್‌ಗಳೂ ಸದಾ ಕಾರ್ಯನಿರತವಾಗಿರುತ್ತವೆ.ಈ ಪರಿಸ್ಥಿತಿಯಲ್ಲಿ ನಾವು ಹೇಗೆ ಅರ್ಜಿ ಸಲ್ಲಿಸುವುದು? ಹಾಗೂ ಯಾರನ್ನೂ ಎಲ್ಲಿ ಸಂಪರ್ಕಿಸುವುದು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.