ಹೇಮಗಿರಿ: ಇಂದಿನಿಂದ ಜಾನುವಾರ ಜಾತ್ರೆ

7

ಹೇಮಗಿರಿ: ಇಂದಿನಿಂದ ಜಾನುವಾರ ಜಾತ್ರೆ

Published:
Updated:

ಕೃಷ್ಣರಾಜಪೇಟೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ಬೆಟ್ಟದ ಮೇಲಿರುವ ಕಲ್ಯಾಣ  ವೆಂಕಟರಮಣ ಸ್ವಾಮಿಗೆ ಪ್ರತಿವರ್ಷ ರಥಸಪ್ತಮಿ ದಿನ ರಥೋತ್ಸವ ನಡೆಯುತ್ತದೆ. ಜೊತೆಗೆ ಇಲ್ಲಿನ  ಬಯಲಿನಲ್ಲಿ ನಡೆಯುವ ಜಾನುವಾರು ಜಾತ್ರೆಗೆ ರಾಜ್ಯದ ವಿವಿಧ ಭಾಗಳಿಂದ ರಾಸುಗಳು ಬರುತ್ತವೆ.ಈ ಬಾರಿ ಜಾನುವಾರು ಜಾತ್ರೆಯು ಫೆ.2 ರಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಜಾನುವಾರುಗಳು  ಜಾತ್ರೆ ಮಾಳಕ್ಕೆ ಬಂದು ಸೇರುತ್ತಿವೆ. ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರುವರಿಯಲ್ಲಿ ನಡೆಯುವ ಈ  ಜಾತ್ರೆಗೆ ನೆರೆಯ ಮೈಸೂರು, ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜಾನುವಾಗಳು  ಬರುತ್ತಿವೆ. ರೂ 10 ಸಾವಿರದಿಂದ ರೂ. 2 ಲಕ್ಷ ಬೆಲೆ ಜಾನುವಾರು ಇರುತ್ತವೆ. ಉತ್ತಮ ರಾಸುಗಳಿಗೆ  ಬಹುಮಾನ ನೀಡಲಾಗುವುದು.ಸೀಮೆಯವರು ಎಂದೇ ಗುರುತಿಸಿಕೊಂಡಿರುವ ಹಾವೇರಿ, ದಾವಣಗೆರೆ, ವಿಜಾಪುರ, ಹುಬ್ಬಳ್ಳಿ ಭಾಗಗಳ  ವ್ಯಾಪಾರಿಗಳು ರಾಸುಗಳನ್ನು ಖರೀದಿಸಲು ಬರುತ್ತಾರೆ.

ಹೇಮಾವತಿ ನದಿ ತಟದಲ್ಲಿ ನಡೆಯುವ ಗ್ರಾಮೀಣ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಜಾತ್ರೆ  ಎಲ್ಲ ನಿಟ್ಟಿನಿಂದಲೂ ಜನರ ಮನಸ್ಸಿಗೆ ಮುದ ನೀಡುತ್ತದೆ. ಒಂದು ವಾರ ನಡೆಯುವ ಈ ಜಾತ್ರೆ ಸಂಭ್ರಮ  ರಥೋತ್ಸವದ ವೇಳೆಗೆ ಕಡಿಮೆಯಾದರೂ ಜನಗಳ ಜಾತ್ರೆ ತೆಪ್ಪೋತ್ಸವದವರೆಗೂ ಮುಂದುವರೆಯುತ್ತದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry