ಹೇಮಗುಡ್ಡದಲ್ಲಿ ನವರಾತ್ರಿ ಉತ್ಸವ

7

ಹೇಮಗುಡ್ಡದಲ್ಲಿ ನವರಾತ್ರಿ ಉತ್ಸವ

Published:
Updated:

ಗಂಗಾವತಿ: ತಾಲ್ಲೂಕಿನ ಐತಿಹಾಸಿಕ ಹಿನ್ನೆಲೆಯ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಳದಲ್ಲಿ ನವರಾತ್ರಿ ಉತ್ಸವ ಆರಂಭವಾಗಿದ್ದು, ಭಾನುವಾರ ಚಂಡಿಕಾ ಸಪ್ತಶತಿ ಪಠಣ, ಸುಬ್ರಹ್ಮಣ್ಯ ಹವನ, ಪಂಚಾಮೃತ ಅಭಿಷೇಕ, ಸಹಸ್ರ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ನಡೆದವು.ಗೋಕರ್ಣದ ಶಿವರಾಮ ಜೋಗಳೆಕರ್ ನೇತೃತ್ವದ ಹತ್ತು ಜನ ಅರ್ಚಕರ ತಂಡ ದೇವಸ್ಥಾನದಲ್ಲಿ ಬೀಡು ಬಿಟ್ಟು, ಚಂಡಿಕಾ ಸಪ್ತಶತಿ ಪಠಣ ಕಾರ್ಯ ನೆರವೇರಿಸುತ್ತಿದೆ. ಮಹೇಶ ಭಟ್ ಮತ್ತು ಡಿ.ಎಸ್. ಜೋಶಿ ನೇತೃತ್ವದಲ್ಲಿ ಸ್ಥಳೀಯ ಅರ್ಚಕರ ತಂಡ ಧಾರ್ಮಿಕ ವಿಧಿ ಪೂರೈಸುತ್ತಿದೆ.ಭಾನುವಾರ ನಡೆದ ಸುಬ್ರಹ್ಮಣ್ಯ ಹವನದಲ್ಲಿ ದುರ್ಗಾ ಪರಮೇಶ್ವರಿ ನವರಾತ್ರಿ ಉತ್ಸವದ ಧರ್ಮಕರ್ತ   ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಆರ್. ಶ್ರೀನಾಥ್ ಸಂಧ್ಯಾ ದಂಪತಿ ಪೂರ್ಣಾಹುತಿ ನೀಡಿದರು.

ಗುರುವಾರ ಸಾಮೂಹಿಕ ವಿವಾಹ ನಡೆಯಲಿವೆ.ಉತ್ತಮ ಫಲಿತಾಂಶ

ನಗರದ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯು ಕಳೆದ ಜುಲೈನಲ್ಲಿ ನಡೆದ ಡಿ.ಇ.ಡಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.ದ್ವಿತೀಯ ವರ್ಷದ ಪರೀಕ್ಷಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಲೋಕೇಶ ತಿಳಿಸಿದ್ದಾರೆ.ತರಗತಿಯಲ್ಲಿನ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು 1720 ಅಂಕದಲ್ಲಿ ಪ್ರಶಿಣಾರ್ಥಿಗಳಾದ ವಿರುಪಾಕ್ಷಿ 1565 ಮತ್ತು ಪ್ರಶಾಂತಿ ಕೆ. 1564 ಅಂಕಗಳಿಸಿ ಶಿಕ್ಷಣ ಸಂಸ್ಥೆಗೆ ಹೆಸರು ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕಲ್ಮಠದ ಡಾ. ಕೊಟ್ಟೂರು ಸ್ವಾಮೀಜಿ ತಿಳಿಸಿದ್ದಾರೆ.ಅ. 3ಕ್ಕೆ ತಪಾಸಣೆ

ತಾಲ್ಲೂಕಿನ ಶ್ರೀರಾಮನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅ.3 ಸೋಮವಾರ ಬೆಳಗ್ಗೆ 11ಕ್ಕೆ

ಗ್ರಾಮದ ಸಾರ್ವಜನಿಕರು ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಅಖಿಲ ಕರ್ನಾಟಕ ಕಮ್ಮವಾರಿ ಸಂಘದ ಆಯೋಜಕತ್ವದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಅ.3ರಂದು ನೇತ್ರ ಪರೀಕ್ಷೆ ಮಾಡಲಾಗುವುದು. ಅವಶ್ಯವಿದ್ದಲ್ಲಿ ಅ.8ರಂದು ಗಂಗಾವತಿಯಲ್ಲಿ ನಡೆಯುವ ಶಿಬಿರದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry