ಗುರುವಾರ , ನವೆಂಬರ್ 21, 2019
20 °C
ಪಂಚರಂಗಿ

ಹೇಮಾಮಾಲಿನಿಗೆ ಪಿ.ಸಿ.ಚಂದ್ರ ಪ್ರಶಸ್ತಿ

Published:
Updated:

ಭಾರತೀಯ ಸಿನಿಮಾ ರಂಗಕ್ಕೆ `ಕನಸಿ ಕನ್ಯೆ' ಹೇಮಾಮಾಲಿನಿ ಕೊಡುಗೆಯನ್ನು ಪರಿಗಣಿಸಿ ಪಿ.ಸಿ.ಚಂದ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಟಿ, ನೃತ್ಯಗಾರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಹೇಮಾಮಾಲಿನಿ ಅವರಿಗೆ ಪಿ.ಸಿ.ಚಂದ್ರ ಪ್ರಶಸ್ತಿಯನ್ನು ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಚಂದ್ರ ಪ್ರದಾನ ಮಾಡಿ, `ಭಾರತೀಯ ಸಿನಿಮಾ ರಂಗದಲ್ಲಿ ಹೇಮಾ ಮಾಲಿನಿ ಅತ್ಯುತ್ತಮ ಹಾಗೂ ಯಶಸ್ವಿ ನಟಿ' ಎಂದು ಬಣ್ಣಿಸಿದರು.ಆಕರ್ಷಕವಾಗಿ ಸೀರೆ ಉಟ್ಟು, ಕತ್ತಿಗೊಂದು ಸುಂದರ ನೆಕ್‌ಲೇಸ್ ತೊಟ್ಟು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದ ಹೇಮಾ `ಭಾರತೀಯ ಚಿತ್ರರಂಗ ನೂರು ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ನನಗೆ ಈ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ವಿಶೇಷ' ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.1993ರಲ್ಲಿ ಆರಂಭಿಸಲಾಗಿರುವ ಪಿ.ಸಿ. ಚಂದ್ರ ಪ್ರಶಸ್ತಿಗೆ ಈವರೆಗೂ ಗಾಯಕರಾದ ಮನ್ನಾ ಡೇ ಹಾಗೂ ಪಂಡಿತ್ ಭೀಮಸೇನ ಜೋಷಿ, ಸಾಹಿತಿ ಗುಲ್ಜಾರ್, ಬರಹಗಾರರಾದ ಮಹಾಶ್ವೇತಾ ದೇವಿ ಹಾಗೂ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಭಾಜನರಾಗಿದ್ದಾರೆ.

 

ಪ್ರತಿಕ್ರಿಯಿಸಿ (+)