ಭಾನುವಾರ, ಮೇ 16, 2021
21 °C

ಹೇಮಾವತಿ ಕಾರ್ಖಾನೆ ಆಡಳಿತ ಮಂಡಳಿ ವಜಾಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ಅವ್ಯವಸ್ಥೆಯ ಆಗರವಾಗಿರುವ ಶ್ರೀನಿವಾಸಪುರದ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಸಹಕಾರ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಕಾರ್ಖಾನೆಯ ಪರಿಶಿಷ್ಟಜಾತಿ, ವರ್ಗದ ಸಂಘದ ಅಧ್ಯಕ್ಷ ಎಚ್.ಆರ್. ನಾರಾಯಣ್ ತಿಳಿಸಿದರು.ಫೆಬ್ರುವರಿಯಲ್ಲಿ ತಾವು ಸೇರಿ ಡಿ.ಎಂ. ಶಂಕರೇಗೌಡ, ರಂಗಮ್ಮ ಅವರನ್ನು ರಾಜ್ಯ ಸರ್ಕಾರ ಕಾರ್ಖಾನೆಯ ನಿರ್ದೇಶಕರನ್ನಾಗಿ ನಾಮ ನಿರ್ದೇಶನ ಮಾಡಿತು. ಆದರೆ ಇದುವರೆಗೆ ಸೌಜನ್ಯಕ್ಕೂ ಆಹ್ವಾನಿಸಿ ಕಾರ್ಖಾನೆಯ ಬಗ್ಗೆ ಚರ್ಚಿಸುವ ಗೋಜಿಗೆ ಹೋಗಿಲ್ಲ. ತಮ್ಮನ್ನು ಸಭೆಗೆ ಕರೆದರೆ ಆಡಳಿತ ಮಂಡಳಿಯ ಲೋಪದೋಷ ಎತ್ತಿ ತೋರಿಸುವ ಭಯ ಕಾಡುತ್ತಿರುವು ದರಿಂದ ಉದ್ದೇಶಪೂರ್ವಕವಾಗಿ ಆಡಳಿತ ಮಂಡಳಿ ಸಭೆ ಕರೆಯುತ್ತಿಲ್ಲ ಎಂದು ಗೋಷ್ಟಿಯಲ್ಲಿ ದೂರಿದರು.ಕಾರ್ಖಾನೆಯ ಆವರಣದಲ್ಲಿ ಬೆಲೆ ಬಾಳುವ 17 ಸಾವಿರ ತೇಗದ ಮರವನ್ನು ಕೇವಲ 24 ಲಕ್ಷ ರೂ. ಗೆ ಟೆಂಡರ್ ಕರೆದು ಹರಾಜು ಹಾಕಲಾ ಗಿದೆ.   ರೈತ, ಕಾರ್ಮಿಕ ವಿರೋಧಿ ಯಾ ಗಿರುವ ಆಡಳಿತ ಮಂಡಳಿ ವಜಾ ಗೊಳಿಸಿ ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸ ಬೇಕೆಂದು ಆಗ್ರಹಿಸಿದರು.ಕಡಿಮೆ ಬೋನಸ್: ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎ. ಗೋಪಾಲಸ್ವಾಮಿ, ಉಪಾಧ್ಯಕ್ಷ ಬಸವರಾಜು ಮಾತನಾಡಿ, ಈ ವರ್ಷ ಕೇವಲ 6500 ರೂ. ಮಾತ್ರ ಬೋನಸ್ ನೀಡಲಾಗಿದೆ ಎಂದರು.

 ನಿರ್ದೇಶಕ ಡಿ.ಎಂ. ಶಂಕರೇಗೌಡ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.