ಭಾನುವಾರ, ಜೂನ್ 13, 2021
21 °C

ಹೇಮಾವತಿ ನಾಲೆ ಕಾಮಗಾರಿ ಕಳಪೆ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಕ್ಕೇರಿ: ತಾಲ್ಲೂಕಿನ ರೈತರ ಬವಣೆ ನೀಗುವ ಬಹುಕೋಟಿ ಕಾಮಗಾರಿಯಾದ ಹೇಮಾವತಿ ನಾಲಾ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿಯ ಮುಖಂಡರು, ವರ್ತೂರು ಪ್ರಕಾಶ್ ಯುವ ಸೇನೆ ಜಿಲ್ಲಾಧ್ಯಕ್ಷರು ಮಂದಗೆರೆಯ ನಾಲಾ ಸ್ಥಳಕ್ಕೆ ಭೇಟಿ ನೀಡಿದರು.ರೂ. 210ಕೋಟಿ ಅಂದಾಜು ವೆಚ್ಚದಲ್ಲಿ ಉಪ್ಪಾರ್ ಹಾಗೂ ವಡ್ಡಾರ್ ಗುತ್ತಿಗೆದಾರ ಸಂಸ್ಥೆಯಿಂದ ನಡೆಯುತ್ತಿರುವ ಕಾಮಗಾರಿ ಬಹುತೇಕ ಕಳಪೆಯಿಂದ ಕೂಡಿದೆ ಎಂದು ವಿವಿಧ ಸಂಘಟನೆಗಳು, ರೈತ ಸಂಘದವರು ತೀವ್ರ ಪ್ರತಿಭಟನೆ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು. ಮಂಗಳವಾರ ನಾಲೆಯ ಜೀರೋ ಕಿ.ಮೀ.ನಿಂದ 2ಕಿ.ಮೀ.ವರೆಗೆ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಮುಖಂಡರು ಗುಣಮಟ್ಟ ಕಾಪಾಡಲು ಗುತ್ತಿಗೆದಾರರು ಕಡೆಗಣಿಸಿದ್ದಾರೆ.

 

ಸಿಮೆಂಟು ಲೈನಿಂಗ್‌ಗೆ ಸ್ಟೀಲ್ ರಾಡ್ ಬಳಕೆ ಕಡಿಮೆಯದಾಗಿದೆ. ಲೈನಿಂಗ್ ಗುಣಮಟ್ಟ ಕಳಪೆಯಾಗಿದ್ದು ವರ್ಷದೊಳಗೆ ಹಾಳಾಗಲಿದೆ. ಮರಳಿನ ಗುಣಮಟ್ಟ, ಸಿಮೆಂಟ್ ಗ್ರೇಡ್ ಕಡಿಮೆಯಾದಾಗಿದ್ದು ಗುಣಮಟ್ಟ ಕಾಪಾಡಿಕೊಳ್ಳಲೇಬೇಕು, ಹಳೆಯ ಮಧ್ಯೆಗೆ ಹೊಸ ಬಾಟಲ್ ಎನ್ನುವಂತೆ ತೇಪೆ ಹಾಕುವ ಕೆಲಸ ಮಾಡದಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಎಂದು ಸಂಬಂಧಪಟ್ಟ ಎಂಜಿನಿಯರ್ ಜಯರಾಜ್‌ಗೆ ಮುಖಂಡರು ತಿಳಿಸಿದರು.ಮಂದಗೆರೆ, ಗದ್ದೆಹೊಸೂರು, ಅಕ್ಕಿಹೆಬ್ಬಾಳು, ಬೀರುವಳ್ಳಿ, ಸಾಕ್ಷಿಬೀಡು, ಕಟ್ಟೆಕ್ಯಾತನಹಳ್ಳಿಯಲ್ಲದೆ ಅಡಗೂರುವರೆಗಿನವರೆಗೂ ನಾಲೆಯಲ್ಲಿ ನೀರು ಹರಿಯಬೇಕಿದ್ದು ಲಕ್ಷಾಂತರ ರೈತರ ಬದುಕು ಇಲ್ಲಿ ಅಡಗಿದೆ ಎಂದು ಮುಖಂಡರು ಎಂಜಿನಿಯರ್‌ಗೆ ಎಚ್ಚರಿಸಿದರು.ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ, ವರ್ತೂರು ಪ್ರಕಾಶ್ ಯುವಸೇನೆ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಬಿಜೆಪಿ ಮುಖಂಡರಾದ ಕೆ.ಶ್ರೀನಿವಾಸ್, ವರದರಾಜೇಗೌಡ, ಕುಮಾರಸ್ವಾಮಿ, ಎಚ್.ಪಿ.ಮಹೇಶ್, ಸ್ವರೂಪ್‌ಚಂದ್, ಬ್ಯಾಂಕ್ ಕೆ.ಎನ್.ಪರಮೇಶ್, ರೂಪ, ಬಿ.ಆರ್.ಪ್ರಸನ್ನ, ಎಚ್.ಆರ್.ಲೋಕೇಶ್, ಎಇಇ ಜಯರಾಜ್, ಶ್ರೀನಿವಾಸ್ ಇತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.