ಹೇಮಾವತಿ ನೀರನ್ನು ಕೆರೆಗೆ ತುಂಬಿಸಿ

7

ಹೇಮಾವತಿ ನೀರನ್ನು ಕೆರೆಗೆ ತುಂಬಿಸಿ

Published:
Updated:

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ದೇವಲಾಪುರ ಹೋಬಳಿಯಲ್ಲಿ ಮಳೆಗಾಲದಲ್ಲಿ ಸರಿಯಾಗಿ ಮಳೆ ಬಾರದೆ ಇರುವ ಪ್ರಯುಕ್ತ ಬೆಳೆ ಇಲ್ಲ. ಕೆರೆ ಬಾವಿಗಳಲ್ಲಿ ನೀರು ಸಂಗ್ರಹ ವಿಲ್ಲದೆ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೆ ಹಳ್ಳಿಯ ಜನರಿಗೆ ಕುಡಿಯಲು ಸಹಾ ನೀರಿಲ್ಲದೆ ತೊಂದರೆಯಾಗಿದೆ.ಹಲವಾರು ಸಲ ಸಂಬಂಧಪಟ್ಟ ಹೇಮಾವತಿ ನಾಲೆ ಉಪವಿಭಾಗ ನಂ. 28ರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ದೇವಲಾಪುರ ಹೋಬಳಿಯಲ್ಲಿ ಬರುವ ಸುಮಾರು 60 ಹಳ್ಳಿಗಳ ಪೈಕಿ ದಂಡಿಗನಹಳ್ಳಿ, ಹುಳ್ಳೇನಹಳ್ಳಿ, ಬಿಂಡೇನಹಳ್ಳಿ ಕೆರೆಗಳಿಗೆ ನೀರನ್ನು ತುಂಬಿಸಿ ಎಂದು ಅರ್ಜಿ ಕೊಟ್ಟಾಗ, ಇನ್ನು ಒಂದು ವಾರ ದಲ್ಲಿ ನೀರನ್ನು ಕೊಡುತ್ತೇವೆ ಎಂದು ಹೇಳಿದ ಅಧಿಕಾರಿಗಳು 4 ತಿಂಗಳು ಕಳೆದರೂ ನಾಲ್ಕು ತೊಟ್ಟು ನೀರನ್ನೂ ಕೊಡಲಿಲ್ಲ.ಹೇಮಾವತಿ ಅಣೆಕಟ್ಟೆಯಿಂದ ಹೊಳೆನರಸೀಪುರ, ಕೆ. ಆರ್. ಪೇಟೆ, ಪಾಂಡವ ಪುರ, ಚನ್ನರಾಯಪಟ್ಟಣ, ಕುಣಿಗಲ್, ಗುಬ್ಬಿ ತಾಲ್ಲೂಕುಗಳಿಗೆ ಮತ್ತು ತಮಿಳುನಾಡಿಗೆ ನೀರನ್ನು ಹರಿಸುತ್ತಾರೆ. ಆದರೆ ನಾಗಮಂಗಲ ತಾಲ್ಲೂಕು ದೇವಲಾ ಪುರ ಹೋಬಳಿಯಲ್ಲಿ ಬರುವ ಹಳ್ಳಿಗಳಿಗೆ ನೀರನ್ನು ಕೊಡಿ ಎಂದು ಕೇಳಿದರೆ ಇಲ್ಲ ಸಲ್ಲದ ಕಾರಣವನ್ನು ನೀಡುತ್ತಾರೆ.ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ದೇವಲಾಪುರ ಹೋಬಳಿ ಯಲ್ಲಿ ಬರುವ ಸುಮಾರು 60 ಹಳ್ಳಿಗಳ ಪೈಕಿ ಯಾವ ಯಾವ ಹಳ್ಳಿಯ ಕೆರೆಗಳಿಗೆ ನೀರನ್ನು ತುಂಬಿಸಲು ಸಾಧ್ಯವಿದೆಯೋ ಆ ಹಳ್ಳಿಯ ಕೆರೆಗಳಿಗೆ ನೀರನ್ನು ತುಂಬಿಸಬೇಕು. ಆ ಕಾರ್ಯ ಕೂಡಲೇ ನಡೆಯಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry