ಹೈ.ಕ.ಗೆ ವಿಶೇಷ ಸ್ಥಾನಮಾನ: ಸ್ವಾಗತ

7

ಹೈ.ಕ.ಗೆ ವಿಶೇಷ ಸ್ಥಾನಮಾನ: ಸ್ವಾಗತ

Published:
Updated:

ಬೆಂಗಳೂರು: ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯ ಒಪ್ಪಿಗೆ ದೊರೆತಿರುವುದಕ್ಕೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಂತಸ ವ್ಯಕ್ತಪಡಿಸಿದ್ದಾರೆ.ಪ್ರಧಾನಿ ಡಾ.ಮನಮೋಹನ್ ಸಿಂಗ್, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಅಡ್ವಾಣಿ, ಅನಂತಕುಮಾರ್ ಲೋಕಸಭೆಯ ಎಲ್ಲ ಸದಸ್ಯರಿಗೆ ಶೆಟ್ಟರ್ ಅಭಿನಂದನೆ ಸಲ್ಲಿಸಿದ್ದಾರೆ.ಪರಮೇಶ್ವರ್ ಸ್ವಾಗತ: ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ಆಗಿರುವ ಈ ಪ್ರಮುಖ ಬೆಳವಣಿಗೆ ಕಾಂಗ್ರೆಸ್ ಕೊಡುಗೆ. ಇದರಿಂದ ಆ ಭಾಗದ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry