ಭಾನುವಾರ, ನವೆಂಬರ್ 17, 2019
29 °C

ಹೈಕೋರ್ಟಿನಲ್ಲಿ ನಾಗರಹಾವು, ವಕೀಲರು ಕಕ್ಕಾಬಿಕ್ಕಿ

Published:
Updated:

ಬೆಂಗಳೂರು (ಪಿಟಿಐ): ಕರ್ನಾಟಕ ಹೈಕೋರ್ಟ್ ನೆಲಮಹಡಿಯ ಮೊಗಸಾಲೆಯಲ್ಲಿ ಹರಿದಾಡಿದ ನಾಗರ ಹಾವೊಂದು ಸೋಮವಾರ ವಕೀಲರು ಮತ್ತು ಇತರರನ್ನು ಕಕ್ಕಾಬಿಕ್ಕಿಗೊಳಿಸಿತು.ಆದರೆ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಸಮೀಪದ ಕಬ್ಬನ್ ಪಾರ್ಕ್ ಕಡೆಗೆ ಹಾದು ಹೋಗುವ ಮೂಲಕ ಅದು ಕೋರ್ಟ್ ಆವರಣದಲ್ಲಿ ಉಂಟಾದ ಆತಂಕವನ್ನು ನಿವಾರಿಸಿತು ಎಂದು ನ್ಯಾಯಾಲಯ ಮೂಲಗಳು ತಿಳಿಸಿದವು.

ಪ್ರತಿಕ್ರಿಯಿಸಿ (+)