ಹೈಕೋರ್ಟ್‌ಗೆ ಅಪ್ಪಾರಾವ್

7

ಹೈಕೋರ್ಟ್‌ಗೆ ಅಪ್ಪಾರಾವ್

Published:
Updated:
ಹೈಕೋರ್ಟ್‌ಗೆ ಅಪ್ಪಾರಾವ್

ಬೆಂಗಳೂರು: ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಎಸ್. ಅಪ್ಪಾ ರಾವ್ ಅವರು

ನೇಮಕಗೊಂಡಿದ್ದು, ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ.ರಾವ್  ಅವರು ವಿಶಾಖಪಟ್ಟಣದ ನಾಗುಲಪಲ್ಲಿ ಗ್ರಾಮದ ಕೃಷಿ ಕುಟುಂಬದಲ್ಲಿ 1952ರ ಜುಲೈ 1ರಂದು ಜನಿಸಿದ್ದಾರೆ. ನಾಗುಲಪಲ್ಲಿಯಲ್ಲಿ ಪದವಿವರೆಗೆ ಓದಿರುವ ಅವರು, 1976 ರಲ್ಲಿ ವಿಶಾಖಪಟ್ಟಣದ ಕಾನೂನು ಕಾಲೇಜಿನಲ್ಲಿ ಅಧ್ಯಯನ ನಡೆಸಿದ್ದಾರೆ. 1976ರಿಂದ ವಕೀಲಿ ವೃತ್ತಿ ಆರಂಭ. 1981ರ ಏಪ್ರಿಲ್‌ನಲ್ಲಿ ವಿಶಾಖಪಟ್ಟಣದ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ನ್ಯಾಯಾಧೀಶರಾಗಿ ನೇಮಕ. 1995ರಲ್ಲಿ ಗುಂಟೂರಿನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ.ಮಚ್ಚಲಿಪಟ್ಟಣದ ನಿಜಾಮಾಬಾದ್ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ  ಹಾಗೂ ಆಂಧ್ರ ಪ್ರದೇಶ ಸರ್ಕಾರದ ಕಾನೂನು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ. 2010ರ ನವೆಂಬರ್ 15ರಂದು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಬಡ್ತಿ. ಇದರಿಂದ ನ್ಯಾಯಮೂರ್ತಿಗಳ ಸಂಖ್ಯೆ 41ಕ್ಕೆ ಏರಿದೆ. 2014ರ ಜುಲೈ 1ರಂದು ರಾವ್ ಅವರು ನಿವೃತ್ತಿ ಹೊಂದಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry