ಹೈಕೋರ್ಟ್‌ಗೆ ದಸರಾ ರಜೆ

7

ಹೈಕೋರ್ಟ್‌ಗೆ ದಸರಾ ರಜೆ

Published:
Updated:

ಬೆಂಗಳೂರು: ಹೈಕೋರ್ಟ್‌ನ ಪ್ರಧಾನ ಪೀಠ ಹಾಗೂ ಧಾರವಾಡ, ಗುಲ್ಬರ್ಗದ ಸಂಚಾರಿ ಪೀಠಗಳಿಗೆ ಅ.3ರಿಂದ 8ರ ವರೆಗೆ ದಸರಾ ರಜೆ ಘೋಷಿಸಲಾಗಿದೆ.ರಜಾಕಾಲದಲ್ಲಿ ಸಂಚಾರಿ ಪೀಠಗಳು ಕಾರ್ಯ ನಿರ್ವಹಿಸುವುದಿಲ್ಲ.ಆದರೆ, ಬೆಂಗಳೂರಿನ ಪ್ರಧಾನ ಪೀಠದಲ್ಲಿ ಅ.4 ಮತ್ತು 6ರಂದು ರಜಾಕಾಲದ ವಿಶೇಷ ಪೀಠ ಕಾರ್ಯ ನಿರ್ವಹಿಸಲಿದೆ. ಅಂದು ತುರ್ತಾಗಿ ನಡೆಯಬೇಕಿರುವ ಅರ್ಜಿಯ ವಿಚಾರಣೆಗಳನ್ನು ನ್ಯಾಯಮೂರ್ತಿಗಳು ಕೈಗೆತ್ತಿಕೊಳ್ಳಲಿದ್ದಾರೆ.ಇದೇ 11ರಂದು ವಾಲ್ಮೀಕಿ ಜಯಂತಿ ಇರುವ ಪ್ರಯುಕ್ತ ಸರ್ಕಾರಿ ರಜೆ ಇದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕೋರಿಕೆ ಮೇರೆಗೆ ಅ.10ರಂದೂ ಕೋರ್ಟ್‌ಗೆ ರಜೆ ನೀಡಲಾಗಿದೆ. ಈ ದಿನಕ್ಕೆ ಪರ್ಯಾಯವಾಗಿ ನವೆಂಬರ್ 19ರ ಶನಿವಾರ ಕೋರ್ಟ್ ಕಾರ್ಯ ನಿರ್ವಹಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry